ನವದೆಹಲಿ: ಭಾರತದಿಂದ ಪ್ರಯಾಣಿಕ ವಾಹನಗಳ ರಫ್ತು ಪ್ರಸಕ್ತ ಹಣಕಾಸು ವರ್ಷದ ಒಂಭತ್ತು ತಿಂಗಳಿನಲ್ಲಿ 4.24 ಲಕ್ಷ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ರಫ್ತು ಪ್ರಮಾಣ ಶೇಕಡ 46ರಷ್ಟು ಹೆಚ್ಚಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 2.91 ಲಕ್ಷ ಪ್ರಯಾಣಿಕ ವಾಹನಗಳು ರಫ್ತಾಗಿದ್ದವು ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಹೇಳಿದೆ.

ಈ ಅವಧಿಯಲ್ಲಿ ಕಾರು ಮಾರಾಟವು ಶೇ 45ರಷ್ಟು ಹೆಚ್ಚಾಗಿದ್ದು 2.75 ಲಕ್ಷಕ್ಕೆ ತಲುಪಿದೆ. ಯುಟಿಲಿಟಿ ವಾಹನಗಳ ರಫ್ತು ಪ್ರಮಾಣವು ಶೇ 47ರಷ್ಟು ಹೆಚ್ಚಾಗಿದೆ. ವ್ಯಾನ್ ರಫ್ತು 877ರಿಂದ 1,621ಕ್ಕೆ ಏರಿಕೆ ಆಗಿದೆ.

ಮಾರುತಿ ಸುಜುಕಿ ಇಂಡಿಯಾ 1.68 ಲಕ್ಷ ವಾಹನಗಳನ್ನು ರಫ್ತು ಮಾಡಿದ್ದು, ಮೊದಲ ಸ್ಥಾನದಲ್ಲಿದೆ. ಹುಂಡೈ ಮತ್ತು ಕಿಯಾ ಇಂಡಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ರಫ್ತು 1.36 ಲಕ್ಷದಿಂದ 1.39 ಲಕ್ಷಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.