ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಸಿಕೊಳ್ಳದ ವಾಹನ ಉದ್ಯಮ

ಪ್ರಯಾಣಿಕ ವಾಹನ ಮಾರಾಟ 18 ವರ್ಷಗಳಲ್ಲಿಯೇ ಭಾರಿ ಕುಸಿತ
Last Updated 11 ಜೂನ್ 2019, 18:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಾಹನ ಉದ್ಯಮ ಚೇತರಿಸಿಕೊಳ್ಳುವ ಲಕ್ಷಣಗಳೇ ಕಂಡುಬರುತ್ತಿಲ್ಲ.ಸತತ 11ನೇ ತಿಂಗಳಿನಲ್ಲಿಯೂ ಪ್ರಯಾಣಿಕ ವಾಹನ ಮಾರಾಟ ಇಳಿಕೆ ಕಂಡಿದೆ.

ಮೇ ತಿಂಗಳಿನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 20.55ರಷ್ಟು ಇಳಿಕೆಯಾಗಿದೆ. 18 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಇಳಿಕೆ ಇದಾಗಿದೆ. 2001ರ ಸೆಪ್ಟೆಂಬರ್‌ನಲ್ಲಿ ಶೇ 21.91ರಷ್ಟು ಇಳಿಕೆ ಕಂಡಿತ್ತು.

ಕಾರು ಮಾರಾಟವೂ ಶೇ 26.03ರಷ್ಟು ಕಡಿಮೆ
ಯಾಗಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‌ಐಎಂ) ಮಾಹಿತಿ ನೀಡಿದೆ.

‘ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗುತ್ತಿರುವುದರಿಂದ ಕಂಪನಿಗಳು ತಯಾರಿಕೆಯನ್ನು ಕಡಿಮೆ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯಮದ ಚೇತರಿಕೆಗೆ ಕೇಂದ್ರ ಸರ್ಕಾರ ಕೆಲವು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ವಿಷ್ಣು ಮಾಥೂರ್‌ ಹೇಳಿದ್ದಾರೆ.

‘ಲೋಕಸಭಾ ಚುನಾವಣೆಯ ಬಳಿಕ ಮಾರಾಟದಲ್ಲಿ ಚೇತರಿಕೆ ಕಾಣುವ ವಿಶ್ವಾಸ ವ್ಯಕ್ತವಾಗಿತ್ತು. ಆದರೆ ಹಾಗಾಗಲಿಲ್ಲ’ ಎಂದಿದ್ದಾರೆ.

ಮಾರುತಿ ಸುಜುಕಿ ಇಂಡಿಯಾದ ಪ್ರಯಾಣಿಕ ವಾಹನ ಮಾರಾಟ ಶೇ 25ರಷ್ಟು, ಟಿವಿಎಸ್‌ ಮೋಟರ್‌ ಮಾರಾಟ ಶೇ 3.79ರಷ್ಟು, ಹೀರೊ ಮೊಟೊಕಾರ್ಪ್‌ ಶೇ 7.98ರಷ್ಟು, ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್ ಸ್ಕೂಟರ್ ಇಂಡಿಯಾದ ಮಾರಾಟ ಶೇ 11.4ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT