ಬುಧವಾರ, ಮೇ 19, 2021
22 °C

ಖಜಾನಾ ಜುವೆಲರಿ: ರಶ್ಮಿಕಾ ಮಂದಣ್ಣ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣಗಳ ರಿಟೇಲ್‌ ಮಾರಾಟ ಕಂಪನಿ ‘ಖಜಾನಾ’ದ ಹೊಸ ಬ್ರ್ಯಾಂಡ್‌ ರಾಯಭಾರಿ ಆಗಿ ನಟಿ ರಶ್ಮಿಕಾ ಮಂದಣ್ಣ ನೇಮಕ ಆಗಿದ್ದಾರೆ.

ದಕ್ಷಿಣ ಭಾರತದ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿರುವ ಅವರು ಬಾಲಿವುಡ್‌ಗೂ ಪ್ರವೇಶಿಸುತ್ತಿದ್ದಾರೆ. ‘ಅಕ್ಷಯ ತೃತೀಯಾ ಸಮೀಪಿಸುತ್ತಿರುವುದರಿಂದ ರಶ್ಮಿಕಾ ಅವರು ಖಜಾನಾ ಬ್ರ್ಯಾಂಡ್‌ನ ಅತ್ಯಾಕರ್ಷಕ ವಿನ್ಯಾಸ ಮತ್ತು ಉತ್ಕೃಷ್ಟ ಫಿನಿಶಿಂಗ್‌ ಇರುವ ಆಭರಣಗಳನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಿದ್ದಾರೆ’ ಎಂದು ಕಂಪನಿ ಹೇಳಿದೆ.

‘ವಿಶಿಷ್ಟ ವಿನ್ಯಾಸ ಮತ್ತು ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡುವ ಖಜಾನಾ ಜೊತೆ ಕೆಲಸ ಮಾಡುವುದು ಹೆಮ್ಮೆಯ ವಿಷಯ’ ಎಂದು ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು