ಬೆಂಗಳೂರು: ಖ್ಯಾತ ಉದ್ಯಮಿ ರತನ್ ಟಾಟಾ ಅವರು ಬರೆದಿಟ್ಟಿದ್ದ ಉಯಿಲು ಬಹಿರಂಗವಾಗಿದ್ದು ಅದರಲ್ಲಿ ನಿಗೂಢ ವ್ಯಕ್ತಿಯೊಬ್ಬರಿಗೆ ಸುಮಾರು ₹500 ಕೋಟಿಯ ಆಸ್ತಿಯನ್ನು ರತನ್ ಟಾಟಾ ಅವರು ಬರೆದಿದ್ದಾರೆ ಎಂದು ವರದಿಯಾಗಿದೆ.

ಉಯಿಲಿನ ಪ್ರಕಾರ ಜಾರ್ಖಂಡ್ನ ಜಮ್ಶೇಡ್ಪುರದ ಮೋಹಿನಿ ಮೋಹನ್ ದತ್ತಾ ಎನ್ನುವ ವ್ಯಕ್ತಿಗೆ ರತನ್ ಟಾಟಾ ಕಡೆಯಿಂದ ₹500 ಕೋಟಿಯ ಆಸ್ತಿ ಸಿಗುತ್ತಿದೆ.

ಮೋಹಿನಿ ಮೋಹನ್ ದತ್ತಾ ಎನ್ನುವರು ಟಾಟಾ ಗ್ರೂಪ್ನ ಕೆಲವೇ ಕೆಲವು ಉನ್ನತ ವ್ಯಕ್ತಿಗಳಿಗೆ ಮಾತ್ರ ಗೊತ್ತು ಎನ್ನಲಾಗಿದೆ.

ದತ್ತಾ ಅವರುನ್ನು ರತನ್ ಅವರು ಐದಾರು ದಶಕಗಳ ಹಿಂದೆಯೇ ಭೇಟಿಯಾಗಿದ್ದರು. ಯಾವುದೋ ಕಾರಣದಿಂದ ರತನ್ ಅವರು ದತ್ತಾ ಅವರನ್ನು ಮೆಚ್ಚಿಕೊಂಡಿದ್ದರು. ಅವರ ಸಂಬಂಧ ಕೊನೆಯವರೆಗೂ ಇತ್ತು. ಹೀಗಾಗಿ ರತನ್ ಅವರು ತಮ್ಮ ಪಾಲಿನ ಆಸ್ತಿಯಲ್ಲಿ ಗಮನಾರ್ಹ ಪ್ರಮಾಣವನ್ನು ಪ್ರೀತಿಯಿಂದ ನೀಡಿದ್ದಾರೆ ಎಂದು ಹೇಳಲಾಗಿದೆ.

ಮೋಹಿನಿ ಮೋಹನ್ ದತ್ತಾ ಅವರು ಟ್ರಾವೆಲ್ ಹಾಗೂ ಹೋಟೆಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಂಪನಿಯೊಂದನ್ನು ತೆರೆದಿದ್ದರು. ಅದು ಸದ್ಯ ಟಾಟಾ ಗ್ರೂಪ್ ಒಡೆತನದಲ್ಲಿದೆ. ಅವರ ಮಕ್ಕಳು ಟಾಟಾ ಗ್ರೂಪ್ ಅಡಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆ ಟಾಟಾ ಕಂಪನಿಯಲ್ಲಿ ಹಾಗೂ ಉದ್ಯಮ ವಲಯದಲ್ಲಿ ಬಹುತೇಕರಿಗೆ ಗೊತ್ತಿಲ್ಲ. ಇದು ಅಚ್ಚರಿಯ ವಿಷಯವಾಗಿದೆ ಎಂದು ಹೇಳಲಾಗಿದೆ.

ವೈಯಕ್ತಿಕವಾಗಿ ಸುಮಾರು ₹8 ಸಾವಿರ ಕೋಟಿಗೂ ಅಧಿಕ ಮೌಲ್ಯದ ಹಣ, ಆಸ್ತಿಯ ಒಡೆಯರಾಗಿರುವ ರತನ್ ಟಾಟಾ ಅವರು ಉಯಿಲಿನ ಮೂಲಕ ಬಹುತೇಕ ಹಂಚಿದ್ದಾರೆ. ಈ ಕುರಿತು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ವರ್ಷ ಅಕ್ಟೋಬರ್ 24 ರಂದು ತಮ್ಮ 86 ನೇ ವಯಸ್ಸಿನಲ್ಲಿ ರತನ್ ಟಾಟಾ ಅವರು ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.