ಶನಿವಾರ, ಮಾರ್ಚ್ 25, 2023
26 °C

ಆರ್‌ಬಿಐನಿಂದ ಗುರುವಾರ ಸಾಲಪತ್ರಗಳ ಖರೀದಿ, ಮಾರಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗುರುವಾರ ₹ 10 ಸಾವಿರ ಕೋಟಿ ಮೌಲ್ಯದ ಸರ್ಕಾರಿ ಸಾಲಪತ್ರಗಳ ಖರೀದಿ ಮತ್ತು ಮಾರಾಟ ಚಟುವಟಿಕೆ ನಡೆಸಲಿದೆ.

ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯ (ಒಎಂಒ) ಮೂಲಕ ಈ ಚಟುವಟಿಕೆ ನಡೆಯಲಿದೆ. ದೀರ್ಘಾವಧಿಯ ಸಾಲಪತ್ರಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡುವ ಉದ್ದೇಶದಿಂದ ಈ ರೀತಿಯ ಖರೀದಿ ಮತ್ತು ಮಾರಾಟ ನಡೆಸಲಾಗುತ್ತದೆ.

ಎರಡು ಹಂತಗಳಲ್ಲಿ ಒಟ್ಟು ₹ 20 ಸಾವಿರ ಕೋಟಿ ಮೊತ್ತದ ಸಾಲಪತ್ರಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಚಟುವಟಿಕೆ ನಡೆಸುವುದಾಗಿ ಆಗಸ್ಟ್‌ 31ರಂದು ಆರ್‌ಬಿಐ ಘೋಷಿಸಿತ್ತು.

ಸೆ.10ರಂದು ₹ 10 ಸಾವಿರ ಕೋಟಿ ಮೌಲ್ಯದ ಮೂರು ಸಾಲಪತ್ರಗಳನ್ನು ಮಾರಾಟ ಮಾಡಲಿದ್ದು, ಅಷ್ಟೇ ಮೊತ್ತಕ್ಕೆ ಮೂರು ಸಾಲಪತ್ರಗಳನ್ನು ಖರೀದಿಸಲಿದೆ. ಎರಡನೇ ಹಂತವು ಸೆ.17ರಂದು ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು