ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ನಬ್ ಕುಮಾರ್ ಚೌಧರಿ RBIನ ಹೊಸ ಕಾರ್ಯನಿರ್ವಾಹಕ ನಿರ್ದೇಶಕ

Published 1 ಜುಲೈ 2024, 12:56 IST
Last Updated 1 ಜುಲೈ 2024, 12:56 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ ನ (RBI) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಬ್ ಕುಮಾರ್ ಚೌಧರಿ ಅವರು ನೇಮಕಗೊಂಡಿದ್ದಾರೆ. ಬುಧವಾರದಿಂದ ಇವರು ನೂತನ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ.

ಡಿಐಸಿಜಿಸಿ ಸೇರಿದಂತೆ ಮೂರು ವಿಭಾಗಗಳನ್ನು ಚೌಧರಿ ನೋಡಿಕೊಳ್ಳಲಿದ್ದಾರೆ. ಸದ್ಯ ಇವರು ಬ್ಯಾಂಕ್‌ನ ಮೇಲ್ವಿಚಾರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಕಾರ್ಯನಿರ್ವಾಹಕ ನಿರ್ದೇಶಕರಾಗಿ ಚೌಧರಿ ಅವರು ಠೇವಣಿ ವಿಮೆ, ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ (ಡಿಐಸಿಜಿಸಿ) ಹಾಗೂ ಅಂತರರಾಷ್ಟ್ರೀಯ ವಿಭಾಗವನ್ನು ನಿರ್ವಹಿಸಲಿದ್ದಾರೆ’ ಎಂದು ಆರ್‌ಬಿಐ ಪ್ರಕಟಣೆ ಹೇಳಿದೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಚೌಧರಿ ಅವರು ಅರ್ಥಶಾಸ್ತ್ರ ಪದವೀಧರರು. ಇದರೊಂದಿಗೆ ಐಐಬಿಎಫ್‌ನ ಪ್ರಮಾಣಪತ್ರವನ್ನೂ ಹೊಂದಿದ್ದಾರೆ. ಆರ್‌ಬಿಐನಲ್ಲಿ ಮೂರು ದಶಕಗಳ ವೃತ್ತಿ ಅನುಭವ ಹೊಂದಿದ್ದಾರೆ. ಹಣಕಾಸು ವಿಭಾಗದ ಮೇಲ್ವಿಚಾರಣೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT