ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ಈವರೆಗಿನ ಅತ್ಯಧಿಕ ₹ 2.11 ಲಕ್ಷ ಕೋಟಿ ಡಿವಿಡೆಂಡ್ ನೀಡಲು RBI ಅನುಮತಿ

Published 22 ಮೇ 2024, 12:56 IST
Last Updated 22 ಮೇ 2024, 12:56 IST
ಅಕ್ಷರ ಗಾತ್ರ

ಮುಂಬೈ: ಕಳೆದ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಈವರೆಗಿನ ಗರಿಷ್ಠ ಡಿವಿಡೆಂಡ್‌ ₹2.11 ಲಕ್ಷ ಕೋಟಿಯನ್ನು ಪಾವತಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಸಿದೆ.

2022–23ರಲ್ಲಿ ಡಿವಿಡೆಂಡ್‌ ಅಥವಾ ಹೆಚ್ಚುವರಿ ಹಣ ಪಾವತಿ ರೂಪದಲ್ಲಿ ₹87,416 ಕೋಟಿಯನ್ನು ಆರ್‌ಬಿಐ ಕೇಂದ್ರಕ್ಕೆ ವರ್ಗಾಯಿಸಿತ್ತು. 2018–19ರಲ್ಲಿ ಅತ್ಯಧಿಕ ₹1.76 ಲಕ್ಷ ಕೋಟಿಯನ್ನು ವರ್ಗಾಯಿಸಿತ್ತು.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆದ ಬ್ಯಾಂಕ್‌ನ ಕೇಂದ್ರೀಯ ಮಂಡಳಿ ನಿರ್ದೇಶಕರ 608ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

‘2023–24ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹2,10,874 ಕೋಟಿಯನ್ನು ವರ್ಗಾಯಿಸಲು ಮಂಡಳಿ ಒಪ್ಪಿದೆ’ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಭೆಯಲ್ಲಿ ಆರ್‌ಬಿಐ ಮಂಡಳಿಯು ಜಾಗತಿಕ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿತು. ಜತೆಗೆ ಬೆಳವಣಿಗೆಗೆ ಎದುರಾಗಬಹುದಾದ ಅಪಾಯದ ಕುರಿತೂ ಚರ್ಚಿಸಿತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಅಥವಾ ವೆಚ್ಚ ಮತ್ತು ಆದಾಯ ನಡುವಿನ ಅಂತರವನ್ನು ₹17.34 ಲಕ್ಷ ಕೋಟಿಗೆ (ಜಿಡಿಪಿಯ ಶೇ 5.1ರಷ್ಟು) ನಿಯಂತ್ರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 2024–25ನೇ ಸಾಲಿಗೆ ಕೇಂದ್ರ ಸರ್ಕಾರವು ಆರ್‌ಬಿಐ ಹಾಗೂ ಇತರ ಸಾರ್ವಜನಿಕ ಬ್ಯಾಂಕ್‌ಗಳಿಂದ ಡಿವಿಡೆಂಡ್ ಆದಾಯವಾಗಿ ₹1.02 ಲಕ್ಷ ಕೋಟಿಯನ್ನು ನಿರೀಕ್ಷಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT