ಮಂಗಳವಾರ, ಆಗಸ್ಟ್ 16, 2022
20 °C

ಕಾರ್ಡ್‌ ವಿವರ ಸಂಗ್ರಹ: ಗಡುವು ಮತ್ತೆ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಪಾವತಿ ವಹಿವಾಟಿನ ಪಾಲುದಾರರು ‘ಟೋಕನ್’ ರೂಪದಲ್ಲಿ ಮಾತ್ರ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರಲು ನೀಡಿದ್ದ ಗಡುವನ್ನು ಆರ್‌ಬಿಐ ಸೆಪ್ಟೆಂಬರ್‌ 30ರವರೆಗೆ ಮುಂದೂಡಿದೆ.

ಉದ್ಯಮ ವಲಯ ಸಲ್ಲಿಸಿದ್ದ ಮನವಿಗಳನ್ನು ಆಧರಿಸಿ ಆರ್‌ಬಿಐ ಈ ತೀರ್ಮಾನ ಕೈಗೊಂಡಿದೆ. ಈ ವ್ಯವಸ್ಥೆಯ ಜಾರಿಗೆ ನೀಡಿದ್ದ ಗಡುವನ್ನು ಆರ್‌ಬಿಐ ಈ ಹಿಂದೆಯೂ ವಿಸ್ತರಿಸಿತ್ತು.

ವ್ಯವಸ್ಥೆಯ ಜಾರಿಯಲ್ಲಿ ಕೆಲವು ಸಮಸ್ಯೆಗಳು ಇವೆ ಎಂದು ಉದ್ಯಮ ವಲಯವು ಹೇಳಿತ್ತು. ‘ಕಾರ್ಡ್‌ ಹೊಂದಿರುವವರಿಗೆ ತೊಂದರೆ ಆಗದಿರಲಿ ಎಂದು ಇವುಗಳನ್ನು ಪರಿಶೀಲಿಸಲಾಗುತ್ತಿದೆ, ಸಂಬಂಧಪಟ್ಟವರ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ಆರ್‌ಬಿಐ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು