ಬುಧವಾರ, ಫೆಬ್ರವರಿ 19, 2020
18 °C

ಆರ್‌ಬಿಐ:ಹೊಸ ಪ್ರಿಪೇಯ್ಡ್‌ಪಾವತಿ ಕಾರ್ಡ್‌ ಪರಿಚಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಭಾರತೀಯ ರಿಸರ್ವ್‌ ಬ್ಯಾಂಕ್‌, ₹10 ಸಾವಿರದ ಮೊತ್ತದವರೆಗೆ ಸರಕು ಮತ್ತು ಸೇವೆಗಳನ್ನು ಖರೀದಿಸಲು ಬಳಸಬಹುದಾದ ಹೊಸ ಪ್ರಿಪೇಯ್ಡ್‌ ಕಾರ್ಡ್‌ (ಪ್ರಿಪೇಯ್ಡ್‌ ಪೇಮೆಂಟ್‌ ಇನ್ಸ್‌ಟ್ರುಮೆಂಟ್‌–ಪಿಪಿಐ) ಪರಿಚಯಿಸಿದೆ.

ಬ್ಯಾಂಕ್‌ ಖಾತೆಯಿಂದ ಮಾತ್ರ ಈ ಕಾರ್ಡ್‌ಗೆ ಹಣ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಣ್ಣ ಮೊತ್ತದ ಡಿಜಿಟಲ್‌ ವಹಿವಾಟು ಉತ್ತೇಜಿಸುವ ಉದ್ದೇಶಕ್ಕೆ ಈ ಪೂರ್ವಪಾವತಿ ಕಾರ್ಡ್‌ ಪರಿಚಯಿಸಲಾಗಿದೆ.

ನಾಗರಿಕ ಸೇವೆಗಳ ಬಿಲ್‌ ಪಾವತಿ, ವ್ಯಾಪಾರಿ ಮಳಿಗೆಗಳಲ್ಲಿನ ಸರಕುಗಳ ಖರೀದಿ ಮತ್ತು ನಾಗರಿಕ ಸೇವೆಗಳ ಶುಲ್ಕ ಪಾವತಿಗೆ ಇದನ್ನು ಬಳಸಬಹುದು. ಈ ‘ಪಿಪಿಐ’, ಕಾರ್ಡ್‌ ಅಥವಾ ಎಲೆಕ್ಟ್ರಾನಿಕ್‌ ರೂಪದಲ್ಲಿ ಇರಲಿದೆ. ಕಾರ್ಡ್‌ಗೆ ತಿಂಗಳಿಗೆ ₹10 ಸಾವಿರ ಮಾತ್ರ ಭರ್ತಿ ಮಾಡಲು ಅವಕಾಶ ಇರಲಿದೆ. ಹಣ ವರ್ಗಾವಣೆಗೆ ಇದನ್ನು ಬಳಸುವಂತಿಲ್ಲ.

ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗ್ರಾಹಕರಿಂದ ಕನಿಷ್ಠ ಮಾಹಿತಿ ಪಡೆದು ಇಂತಹ ಕಾರ್ಡ್‌ ವಿತರಿಸಲಿವೆ. ಗ್ರಾಹಕರು ಯಾವುದೇ ಸಂದರ್ಭದಲ್ಲಿ ಈ ಕಾರ್ಡ್‌ಗಳ ಬಳಕೆ ಸ್ಥಗಿತಗೊಳಿಸಬಹುದು. ಕಾರ್ಡ್‌ನಲ್ಲಿನ ಹಣವನ್ನು ಬ್ಯಾಂಕ್‌ ಖಾತೆಗೆ ಮರಳಿಸುವ ಸೌಲಭ್ಯ ಒದಗಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು