ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30, 31ರಂದು ಬ್ಯಾಂಕ್‌ ರಜೆ ಇಲ್ಲ

Published 22 ಮಾರ್ಚ್ 2024, 15:32 IST
Last Updated 22 ಮಾರ್ಚ್ 2024, 15:32 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರದ ಜೊತೆ ವ್ಯವಹರಿಸುವ ಆರ್‌ಬಿಐ ಕಚೇರಿಗಳು ಮತ್ತು ಎಲ್ಲ ಬ್ಯಾಂಕ್‌ಗಳು ತೆರಿಗೆದಾರರ ಅನುಕೂಲಕ್ಕಾಗಿ ಮಾರ್ಚ್‌ 30 ಮತ್ತು 31ರಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ.

2023–24ರ ಹಣಕಾಸು ವರ್ಷವು ಮುಕ್ತಾಯ ಆಗುತ್ತಿರುವುದರಿಂದ ಕೊನೆಯ ಎರಡು ದಿನಗಳಾದ ಶನಿವಾರ ಮತ್ತು ಭಾನುವಾರ ಸಾಮಾನ್ಯ ದಿನದಂತೆಯೇ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿವೆ. ಗ್ರಾಹಕರ ಅನುಕೂಲಕ್ಕಾಗಿ ಈ ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (ಆರ್‌ಟಿಜಿಎಸ್‌) ವ್ಯವಸ್ಥೆಯ ಮೂಲಕ ವಹಿವಾಟುಗಳು ಮಾರ್ಚ್ 31ರವರೆಗೆ ಮುಂದುವರಿಯಲಿವೆ. ಸರ್ಕಾರದ ರಶೀದಿಗಳು ಮತ್ತು ಪಾವತಿಗಳನ್ನು ಸುಲಭಗೊಳಿಸಲು, ದೇಶದಾದ್ಯಂತ ವಿಶೇಷ ಕ್ಲಿಯರಿಂಗ್ ಕಾರ್ಯಾಚರಣೆಗಳನ್ನು ನಡೆಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ಅಂತಹ ಕ್ಲಿಯರಿಂಗ್‌ನಲ್ಲಿ ಪ್ರಸ್ತುತಪಡಿಸಬಹುದು ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT