ಗುರುವಾರ , ಆಗಸ್ಟ್ 11, 2022
22 °C

₹ 1.16 ಲಕ್ಷ ಕೋಟಿ ಮೌಲ್ಯದ ಡಾಲರ್‌ ಖರೀದಿಸಿದ ಆರ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಜುಲೈನಲ್ಲಿ ಡಾಲರ್‌ ಖರೀದಿಗೆ ಗಮನ ನೀಡಿದೆ.

₹ 1.16 ಲಕ್ಷ ಕೋಟಿ ಮೌಲ್ಯದ ಡಾಲರ್‌ ಖರೀದಿ ಮಾಡಿದ್ದು, ₹6,570 ಕೋಟಿ ಮೌಲ್ಯದ ಡಾಲರ್‌ ಮಾರಾಟ ಮಾಡಲಾಗಿದೆ ಎಂದು ತನ್ನ ತಿಂಗಳ ವರದಿಯಲ್ಲಿ ತಿಳಿಸಿದೆ. ರೂಪಾಯಿ ಮೌಲ್ಯದಲ್ಲಿ ಭಾರಿ ಏರಿಳಿತ ತಗ್ಗಿಸುವ ಉದ್ದೇಶದಿಂದ ಆರ್‌ಬಿಐ, ಡಾಲರ್‌ ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆ ನಡೆಸುತ್ತದೆ.

2019ರ ಜುಲೈನಲ್ಲಿ ₹ 11,607 ಕೋಟಿ ಮೌಲ್ಯದ ಡಾಲರ್‌ ಖರೀದಿಸಿದ್ದರೆ, ₹ 12,264 ಕೋಟಿ ಮೌಲ್ಯದ ಡಾಲರ್ ಮಾರಾಟ ಮಾಡಿತ್ತು. 2019–20ರಲ್ಲಿ ₹ 3.29 ಲಕ್ಷ ಕೋಟಿ ಮೌಲ್ಯದ ಡಾಲರ್‌ ಖರೀದಿ ಮಾಡಿತ್ತು.

ಮೀಸಲು ಸಂಗ್ರಹ ಹೆಚ್ಚಳ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಸೆಪ್ಟೆಂಬರ್ 4ಕ್ಕೆ ಕೊನೆಗೊಂಡ ವಾರದಲ್ಲಿ ₹ 39.56 ಲಕ್ಷ ಕೋಟಿಗಳಿಗೆ ತಲುಪಿದೆ. ಇದರಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವೇ ₹ 36.35 ಲಕ್ಷ ಕೋಟಿಗಳಷ್ಟಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು