ನವದೆಹಲಿ: ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕದ ಕಾರಣದಿಂದಾಗಿ ತೊಂದರೆಗೆ ಒಳಗಾಗಬಹುದಾದ ಹವಳ ಮತ್ತು ಆಭರಣ, ಜವಳಿ, ಸೀಗಡಿ ಹಾಗೂ ಎಂಎಸ್ಎಂಇ ವಲಯಕ್ಕೆ ಬೆಂಬಲವಾಗಿ ನಿಲ್ಲಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕ್ರಮ ಕೈಗೊಳ್ಳಲಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಸೋಮವಾರ ಹೇಳಿದ್ದಾರೆ.

‘ಈ ಬಗ್ಗೆ ಕೇಂದ್ರ ಸರ್ಕಾರವು ಪರಿಶೀಲನೆ ನಡೆಸುತ್ತಿದೆ. ನಾವು ಆರ್ಬಿಐ ಕಡೆಯಿಂದ ರೆಪೊ ದರ ಇಳಿಸುವ ಕೆಲಸ ಮಾಡುತ್ತಿದ್ದೇವೆ. ಅರ್ಥ ವ್ಯವಸ್ಥೆಯಲ್ಲಿ ನಗದು ಹರಿವು ಹೆಚ್ಚು ಮಾಡಲು ನಾವು ರೆಪೊ ದರವನ್ನು ಶೇಕಡ 1ರಷ್ಟು ತಗ್ಗಿಸಿದ್ದೇವೆ’ ಎಂದು ಮಲ್ಹೋತ್ರಾ ಅವರು ಹೇಳಿದ್ದಾರೆ.

ಸುಂಕದ ಕಾರಣದಿಂದಾಗಿ ತೊಂದರೆಗೆ ಒಳಗಾಗಬಹುದಾದ ವಲಯಗಳಿಗೆ ನೆರವು ಒದಗಿಸಲು ಸರ್ಕಾರ ಎಷ್ಟರಮಟ್ಟಿಗೆ ಸಿದ್ಧವಾಗಿದೆ ಎಂಬ ಪ್ರಶ್ನೆಗೆ ಪ್ರತಿಯಾಗಿ ಅವರು ಈ ಉತ್ತರ ನೀಡಿದ್ದಾರೆ.

‘ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಹಾಗೂ ಸುಂಕದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೆ ಒಳಗಾಗುವ ವಲಯಗಳ ಬೆಳವಣಿಗೆಗೆ, ಒಂದುವೇಳೆ ತೊಂದರೆ ಉಂಟಾದಲ್ಲಿ, ನಮ್ಮಿಂದ ಅಗತ್ಯವಿರುವ ಬೆಂಬಲ ಕ್ರಮಗಳನ್ನು ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ’ ಎಂದು ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದ್ದಾರೆ. ಇದು ಭಾರತದಿಂದ ಅಮೆರಿಕಕ್ಕೆ ವಿವಿಧ ಸರಕುಗಳನ್ನು, ಉತ್ಪನ್ನಗಳನ್ನು ರಫ್ತು ಮಾಡುವ ವಹಿವಾಟಿನಲ್ಲಿ ತೊಡಗಿಸಿಕೊಂಡವರಲ್ಲಿ ಆತಂಕ ಮೂಡಿಸಿದೆ.

‘ಈಗ ನಡೆಯುತ್ತಿರುವ ವಾಣಿಜ್ಯ ಒಪ್ಪಂದ ಕುರಿತ ಮಾತುಕತೆಗಳು ಫಲ ನೀಡುತ್ತವೆ, ದುಷ್ಪರಿಣಾಮ ಕಡಿಮೆ ಇರುತ್ತದೆ ಎಂಬುದು ನಮ್ಮ ಭರವಸೆ’ ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ವಹಿವಾಟುಗಳಲ್ಲಿ ರೂಪಾಯಿ ಬಳಕೆ ಹೆಚ್ಚು ಮಾಡುವುದರ ಬಗೆಗಿನ ಪ್ರಶ್ನೆಗೆ ಅವರು, ‘ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರಗಳು ರೂಪಾಯಿ ಮೂಲಕ ನಡೆಯುವುದು ಸಾಧ್ಯವಾಗಲು ದಶಕಗಳ ಅವಧಿ ಬೇಕಾಗುತ್ತದೆ’ ಎಂದು ಉತ್ತರಿಸಿದ್ದಾರೆ.

‘ಈ ವಿಚಾರವಾಗಿ ಆರ್ಬಿಐ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ವ್ಯಾಪಾರ ವಹಿವಾಟುಗಳ ಸ್ಥಳೀಯ ಕರೆನ್ಸಿಯಲ್ಲಿ ನಡೆಯುವಂತೆ ಆಗುವುದು ದೇಶಕ್ಕೆ ಬಹಳ ಮುಖ್ಯ. ಈ ರೀತಿ ಆದಾಗ ನಮಗೆ ವಿದೇಶಿ ವಿನಿಮಯದಲ್ಲಿನ ಏರಿಳಿತಗಳ ಸಮಸ್ಯೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.