ಗಾಂಧಿನಗರ: ಸೌರ, ಪವನ ಮತ್ತು ಹಸಿರು ಇಂಧನ ವಲಯದ ಯೋಜನೆಗಳಲ್ಲಿ ₹4 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಅದಾನಿ ಸಮೂಹವು ರೀ-ಇನ್ವೆಸ್ಟ್ 2024 ಕಾರ್ಯಕ್ರಮದಲ್ಲಿ ಘೋಷಿಸಿದೆ.
ದೇಶದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಯಾದ ಅದಾನಿ ಗ್ರೀನ್ ಎನರ್ಜಿ, ಪ್ರಸ್ತುತ 11.2 ಗಿಗಾವಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದ್ದು, 2030ರ ವೇಳೆಗೆ 50 ಗಿಗಾವಾಟ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಈ ಹೂಡಿಕೆಯಿಂದ 70 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಕಂಪನಿ ತಿಳಿಸಿದೆ.