ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರಲ್ಲಿ ಮೂರನೇ ಒಂದರಷ್ಟು ಆರ್ಥಿಕತೆಗಳಲ್ಲಿ ಹಿಂಜರಿತ: ಕ್ರಿಸ್ಟಲೀನಾ ಜಾರ್ಜಿವಾ

Last Updated 2 ಜನವರಿ 2023, 21:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಾಗತಿಕವಾಗಿ ಮೂರನೇ ಒಂದರಷ್ಟು ಆರ್ಥಿಕತೆಗಳು ಈ ವರ್ಷ ಹಿಂಜರಿತದ ಸ್ಥಿತಿಗೆ ಹೋಗ
ಲಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಲೀನಾ ಜಾರ್ಜಿವಾ ಹೇಳಿದ್ದಾರೆ.

ಅಮೆರಿಕ, ಯುರೋಪ್‌ ಮತ್ತು ಚೀನಾದಲ್ಲಿ ಆರ್ಥಿಕ ಬೆಳವಣಿಗೆ ಇಳಿಮುಖವಾಗಿದೆ. ಹೀಗಾಗಿ ‌2023ನೇ ವರ್ಷವು ಕಳೆದ ವರ್ಷಕ್ಕಿಂತಲೂ ಕಷ್ಟಕರವಾಗಿ ಇರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂಜರಿತದ ಸ್ಥಿತಿ ಇಲ್ಲದಿರುವ ದೇಶಗಳ ಲಕ್ಷಾಂತರ ಜನರಿಗೆ ಆರ್ಥಿಕ ಹಿಂಜರಿತ
ದಂತಹ ಅನುಭವ ಆಗಲಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಕೆಲವು ತಿಂಗಳುಗಳು ಚೀನಾದ ಪಾಲಿಗೆ ಅತ್ಯಂತ ಕಠಿಣ ಆಗಿರಲಿವೆ. ಚೀನಾದ ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾ
ತ್ಮಕ ಪರಿಣಾಮ ಆಗಲಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯು ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT