ಕಲಬುರಗಿ: ನೆಟೆ ರೋಗದಿಂದಾಗಿ ತೊಗರಿ ಇಳುವರಿ ತೀವ್ರ ಕುಸಿದಿದ್ದು, ಮಾರುಕಟ್ಟೆಗೆ ತೊಗರಿ ಆವಕ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ತೊಗರಿ ದರ ದಿನೇ ದಿನೇ ಏರುತ್ತಿದೆ. ಉತ್ತಮ ಗುಣಮಟ್ಟದ (ಪಟಗಾ) ತೊಗರಿ ಕ್ವಿಂಟಲ್ಗೆ ಸಾರ್ವಕಾಲಿಕ ಗರಿಷ್ಠ ದರವಾದ ₹12,100ಕ್ಕೆ ಭಾನುವಾರ ಮಾರಾಟವಾಗಿದೆ.

ತಿಂಗಳ ಹಿಂದೆ ಬೆಲೆಯು ಕ್ವಿಂಟಲ್ಗೆ ₹10 ಸಾವಿರದ ಆಸುಪಾಸಿನಲ್ಲಿತ್ತು. ನಂತರ ದರ ಹೆಚ್ಚುತ್ತ ಸಾಗಿದೆ. ವಾರದಿಂದ ಸರಾಸರಿ ₹11,600ಕ್ಕೆ ಮಾರಾಟವಾಗುತ್ತಿತ್ತು. ಭಾನುವಾರ ಕ್ವಿಂಟಲ್ಗೆ ₹12,100ರವರೆಗೆ ಮಾರಾಟವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 1,244 ಕ್ವಿಂಟಲ್ ತೊಗರಿ ಆವಕವಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ತೊಗರಿಗೆ ಹೆಚ್ಚು ಬೇಡಿಕೆ: ಉತ್ತರ ಕರ್ನಾಟಕದ ವಿವಿಧೆಡೆ ತೊಗರಿ ಬೆಳೆಯಲಾಗುತ್ತಿದೆ. ಕಲಬುರಗಿಯಲ್ಲಿ ಸುಣ್ಣದ ಕಲ್ಲುಗಳಿರುವ ಜಮೀನಿನಲ್ಲಿ ತೊಗರಿ ಬೆಳೆಯುವುದರಿಂದ ಕ್ಯಾಲ್ಸಿಯಂ ಪ್ರಮಾಣ ತೊಗರಿಯಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ, ಯಥೇಚ್ಛ ಕ್ಯಾಲ್ಸಿಯಂ ಜೊತೆಗೆ ರುಚಿಕರವೂ ಆಗಿರುವುದರಿಂದ ಇಲ್ಲಿನ ತೊಗರಿಯನ್ನು ತಮಿಳುನಾಡು ಹಾಗೂ ಗುಜರಾತ್ಗೆ ರವಾನಿಸಲಾಗುತ್ತದೆ. ತೊಗರಿಗೆ ಭೌಗೋಳಿಕ ವೈಶಿಷ್ಟ್ಯ (ಜಿಐ) ಮಾನ್ಯತೆ ಸಿಕ್ಕಿರುವುದರಿಂದ ಬೇಡಿಕೆ ಹೆಚ್ಚಿದ್ದು, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ‘ಭೀಮಾ ಪಲ್ಸ್’ ಹೆಸರಿನಲ್ಲಿ ತೊಗರಿ ಮಾರಾಟ ಮಾಡಲು ಯೋಜನೆ ರೂಪಿಸಿದೆ.

ಉತ್ಪಾದನೆ ಕುಸಿತ: ಕಳೆದ ವರ್ಷ ತೊಗರಿ ಬೆಳೆಗೆ ನೆಟೆರೋಗ ತಗುಲಿದ್ದರಿಂದ ಉತ್ಪಾದನೆ ಗಣನೀಯವಾಗಿ ಕುಸಿದಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಪ್ರಮಾಣದ ತೊಗರಿ ಸಿಗುತ್ತಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವರ್ತಕರು.

‘2022ರಲ್ಲಿ 4.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ನೆಟೆ ರೋಗ ಹಾಗೂ ಅತಿವೃಷ್ಟಿಯಿಂದಾಗಿ 2.5 ಲಕ್ಷ ಹೆಕ್ಟೇರ್ನಲ್ಲಿನ ತೊಗರಿ ಬೆಳೆ ಹಾನಿಯಾಗಿತ್ತು. ಸರಾಸರಿ 50 ಲಕ್ಷ ಕ್ವಿಂಟಲ್ ತೊಗರಿ ಉತ್ಪಾದನೆ ಆಗಬೇಕಿತ್ತು. ಆದರೆ, ಅಂದಾಜು 33 ಲಕ್ಷ ಕ್ವಿಂಟಲ್ ಮಾತ್ರ ತೊಗರಿ ಇಳುವರಿ ಬಂದಿದೆ. ಹೀಗಾಗಿ, ಸಹಜವಾಗಿಯೇ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.