ಬೆಂಗಳೂರು: ನಗರದ ಕಮ್ಮನಹಳ್ಳಿಯಲ್ಲಿ ಡಿಸೆಂಬರ್ 13ರಂದು ಮಧ್ಯಾಹ್ನ 12ಗಂಟೆಗೆ ರೀಗಲ್ ಜ್ಯುವೆಲ್ಲರಿಯ ಹೊಸ ಮಳಿಗೆಯನ್ನು ನಟಿ ರಾಧಿಕಾ ಪಂಡಿತ್ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಕೇರಳ ಮೂಲದ ರೀಗಲ್ ಜ್ಯುವೆಲ್ಲರಿಯು ಆಭರಣಗಳ ಸಗಟು ಮಾರಾಟ ಮತ್ತು ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಈ ಹೊಸ ಮಳಿಗೆಯ ಬಳಿಕ ಮಲ್ಲೇಶ್ವರ ಸೇರಿ ಬೆಂಗಳೂರಿನ ವಿವಿಧೆಡೆ ಮಳಿಗೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ರೀಗಲ್ ಜ್ಯುವೆಲ್ಲರಿ ತಿಳಿಸಿದೆ.

1978ರಲ್ಲಿ ಶಿವದಾಸ್ ತಾಮರಸ್ಸೆರಿ ಅವರು ಈ ಜ್ಯುವೆಲ್ಲರಿಯನ್ನು ಸ್ಥಾಪಿಸಿದರು. ಕೇರಳದ ಅತಿದೊಡ್ಡ ಆಭರಣ ಮಾರಾಟಗಾರರಲ್ಲಿ ಇದು ಕೂಡ ಒಂದಾಗಿದೆ.

ಈ ಜ್ಯುವೆಲ್ಲರಿಯಲ್ಲಿ ಸಾಕಷ್ಟು ಆಭರಣಗಳ ಸಂಗ್ರಹವಿದೆ. ನವೀನ ವಿನ್ಯಾಸದ ಆಭರಣಗಳು ಲಭ್ಯವಿವೆ. ಹಾಲ್ಮಾರ್ಕ್ ಇರುವ ಚಿನ್ನ ಮತ್ತು ವಜ್ರದ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ. ಗ್ರಾಹಕರಿಗೆ ಕಮ್ಮನಹಳ್ಳಿ ಮಳಿಗೆಯಲ್ಲಿ ಪ್ರೀಮಿಯಂ ಶಾಪಿಂಗ್ ಅನುಭವ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.