ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಪ್ರಯಾಣದಲ್ಲಿಯೂ ಸಿಗಲಿದೆ ಜಿಯೊ ಮೊಬೈಲ್‌ ಸಂಪರ್ಕ: ದಿನಕ್ಕೆ ₹499

Last Updated 25 ಸೆಪ್ಟೆಂಬರ್ 2020, 11:54 IST
ಅಕ್ಷರ ಗಾತ್ರ

ನವದೆಹಲಿ: ವಿಮಾನ ಪ್ರಯಾಣದಲ್ಲಿಯೂ ದೂರಸಂಪರ್ಕ ಸೇವೆ ಪೂರೈಸಲು ರಿಲಯನ್ಸ್ ಜಿಯೊ ಮುಂದಾಗಿದೆ. 22 ವಿಮಾನ ಸಂಸ್ಥೆಗಳ ಅಂತರರಾಷ್ಟ್ರೀಯ ಸಂಚಾರಗಳಲ್ಲಿ ಮೊಬೈಲ್‌ ಸೇವೆ ನೀಡಲು ಏರೊಮೊಬೈಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ವಿಮಾನ ಸಂಚಾರ ಮೊಬೈಲ್‌ ಸೇವೆಗಳಿಗಾಗಿ ₹499ರಿಂದ ಪ್ಲಾನ್‌ ಆರಂಭವಾಗುತ್ತಿದೆ. ಈ ಪ್ಲಾನ್‌ ವ್ಯಾಲಿಡಿಟಿ ಕೇವಲ ಒಂದು ದಿನಕ್ಕೆ ಮಾತ್ರ!

ಸ್ವಿಸ್‌, ವರ್ಜಿನ್‌ ಅಕ್ಟಾಂಟಿಕ್‌, ಎಮಿರೇಟ್ಸ್‌, ಯೂರೊ ವಿಂಗ್ಸ್‌, ಲುಫ್ತಾಂಸಾ, ಇತಿಹಾದ್ ಏರ್‌ವೇಸ್‌, ಮಲಿಂದೊ ಏರ್‌, ಬಿಮನ್‌ ಬಾಂಗ್ಲಾದೇಶ್‌ ಏರ್‌ಲೈನ್ಸ್‌ ಹಾಗೂ ಅಲಿಟಾಲಿಯಾ ಏರ್‌ಲೈನ್ಸ್‌ ಜೊತೆಗೆ ಜಿಯೊ ಒಪ್ಪಂದ ಮಾಡಿಕೊಂಡಿರುವುದಾಗಿ ಜಿಯೊ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ಸಂಚಾರದ ಸಂದರ್ಭದಲ್ಲಿ ಬಳಕೆಗೆ ಮೂರು ಅಂತರರಾಷ್ಟ್ರೀಯ ರೋಮಿಂಗ್‌ ಪ್ಲಾನ್‌ಗಳನ್ನು ಜಿಯೊ ಪ್ರಕಟಿಸಿದೆ. ಭಾರತದಿಂದ ಪ್ರಯಾಣಿಸುವವರಿಗೆ ಒಂದು ದಿನ ವ್ಯಾಲಿಡಿಟಿ ಹೊಂದಿರುವ ₹499, ₹699 ಮತ್ತು ₹999 ಪ್ಯಾಕ್‌ ಹೊರ ತರಲಾಗಿದೆ.

ಜಿಯೊ ವಿಮಾನದಲ್ಲೂ ಮೊಬೈಲ್‌ ಸಂಪರ್ಕ ಸೇವೆ ನೀಡುತ್ತಿರುವ ಭಾರತದ ಮೊದಲ ಮೊಬೈಲ್‌ ಸೇವಾದಾರ ಕಂಪನಿ ಆಗಿದೆ. ಟಾಟಾ ಗ್ರೂಪ್‌ನ ನೆಲ್ಕೊ ವಿಮಾನ ಪ್ರಯಾಣದ ಸಮಯದಲ್ಲಿ ಸಂಪರ್ಕ ಸೇವೆಗಳನ್ನು ಈ ಹಿಂದೆಯೇ ಆರಂಭಿಸಿದೆ.

ಬಿಡುಗಡೆಯಾಗಿರುವ ಎಲ್ಲ ಪ್ಲಾನ್‌ಗಳು 100 ನಿಮಿಷಗಳ ಹೊರ ಹೋಗುವ ಕರೆಗಳು ಮತ್ತು 100 ಎಸ್‌ಎಂಎಸ್‌ ಒದಗಿಸುತ್ತವೆ. ₹499ರ ಪ್ಲಾನ್‌ನಲ್ಲಿ 250 ಎಂಬಿ ಮೊಬೈ‌ಲ್‌ ಡೇಟಾ, ₹699ರ ಪ್ಯಾಕ್‌ ಜೊತೆಗೆ 500 ಎಂಬಿ ಹಾಗೂ ₹999ರ ಪ್ಲಾನ್‌ನಲ್ಲಿ 1ಜಿಬಿ ಡೇಟಾ ಸಿಗಲಿದೆ.

ಆದರೆ, ಈ ಯಾವ ಪ್ಲಾನ್‌ಗಳಲ್ಲಿಯೂ ಒಳಬರುವ ಕರೆಗಳ ಸೌಲಭ್ಯ ಸಿಗುವುದಿಲ್ಲ. 'ಏರೊಮೊಬೈಲ್‌' ಪ್ಯಾನಸೋನಿಕ್‌ ಏವಿಯಾನಿಕ್ಸ್‌ ಕಾರ್ಪೊರೇಷನ್‌ನ ಅಂಗಸಂಸ್ಥೆಯಾಗಿದೆ.

ಮೊದಲ ಬಾರಿ ಈ ಸೇವೆ ಬಳಸುತ್ತಿರುವವರು ಜಿಯೊ ನೆಟ್‌ವರ್ಕ್‌ನಲ್ಲಿ ಪ್ಲಾನ್‌ ಆ್ಯಕ್ಟಿವೇಟ್‌ ಮಾಡಿಕೊಳ್ಳಬೇಕು. ಈ ಸೇವೆಗಳು ಜಿಯೊ ಫೋನ್‌ ಮತ್ತು ಜಿಯೊ ವೈಫೈ ಸಾಧನಗಳಲ್ಲಿ ಕಾರ್ಯಾಚರಿಸುವುದಿಲ್ಲ.

ಎಸ್‌ಎಂಎಸ್‌ ಮತ್ತು ಡೇಟಾ ಸೇವೆಗಳು ಒಪ್ಪಂದ ಮಾಡಿಕೊಳ್ಳಲಾಗಿರುವ ಎಲ್ಲ ವಿಮಾನಗಳಲ್ಲಿಯೂ ಸಿಗಲಿವೆ. ಆದರೆ, ಹೊರ ಹೋಗುವ ಕರೆಗಳ ಸೌಲಭ್ಯ 14 ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ಮಾತ್ರ ಲಭ್ಯವಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT