ಶುಕ್ರವಾರ, ಜುಲೈ 30, 2021
28 °C

ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ₹ 5,683 ಕೋಟಿ ಹೂಡಿಕೆ ಮಾಡಿದ ಎಐಡಿಎ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಬುಧಾಬಿ ಇನ್‌ವೆಸ್ಟ್‌ಮೆಂಟ್‌ ಅಥಾರಿಟಿಗೆ (ಎಡಿಐಎ) ಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇ 1.16ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 5,683.50 ಕೋಟಿ ಸಂಗ್ರಹಿಸಿರುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಭಾನುವಾರ ತಿಳಿಸಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಮಾಡಿಕೊಂಡಿರುವ 8ನೇ ಹೂಡಿಕೆ ಒಪ್ಪಂದ ಇದಾಗಿದೆ. ಈ ಹೂಡಿಕೆಯಿಂದ ಒಟ್ಟಾರೆಯಾಗಿ ಜಿಯೊ ಪ್ಲಾಟ್‌ಫಾರ್ಮ್ಸ್‌ ಸಂಗ್ರಹಿಸಿರುವ ಬಂಡವಾಳ ₹ 97,885.65 ಕೋಟಿಗೆ ಏರಿಕೆಯಾಗಿದೆ.

ಫೇಸ್‌ಬುಕ್‌, ಸಿಲ್ವರ್‌ ಲೇಕ್‌, ವಿಸ್ತಾ ಈಕ್ವಿಟಿ ಪಾರ್ಟ್ನರ್ಸ್‌, ಜನರಲ್‌ ಅಟ್ಲಾಂಟಿಕ್‌, ಕೆಕೆಆರ್, ಮುಬದಲಾ ಈಗಾಗಲೇ ಹೂಡಿಕೆ ಮಾಡಿರುವ ಪ್ರಮುಖ ಕಂಪನಿಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು