ಭಾನುವಾರ, ಡಿಸೆಂಬರ್ 6, 2020
22 °C

ರಿಲಯನ್ಸ್ ರಿಟೇಲ್‌ನಲ್ಲಿ ಅಮೆಜಾನ್ ಹೂಡಿಕೆ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ತನ್ನ ರಿಟೇಲ್‌ ವಹಿವಾಟಿನಲ್ಲಿ ಶೇಕಡ 40ರಷ್ಟು ಷೇರುಗಳನ್ನು ಅಮೆಜಾನ್‌ಗೆ ಮಾರಾಟ ಮಾಡುವ ಪ್ರಸ್ತಾವ ಮಾಡಿದೆ ಎಂದು ವರದಿಯಾಗಿದೆ.

‘ರಿಲಯನ್ಸ್ ಸಮೂಹದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡುವ ಕುರಿತು ಅಮೆಜಾನ್‌ ಮಾತುಕತೆ ನಡೆಸಿದೆ’ ಎಂದು ಮೂಲವೊಂದನ್ನು ಉಲ್ಲೇಖಿಸಿ ‘ಬ್ಲೂಮ್‌ಬರ್ಗ್‌ ನ್ಯೂಸ್’ ವರದಿ ಮಾಡಿದೆ.

ಈ ವಹಿವಾಟಿನ ಮೊತ್ತವು 20 ಬಿಲಿಯನ್ ಅಮೆರಿಕನ್ ಡಾಲರ್ (₹ 1.46 ಲಕ್ಷ ಕೋಟಿ) ಆಗಬಹುದು. ಇದು ಭಾರತದಲ್ಲಿ ನಡೆಯುವ ಅತಿದೊಡ್ಡ ವಹಿವಾಟು ಆಗಬಹುದು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ರಿಲಯನ್ಸ್ ಹಾಗೂ ಅಮೆಜಾನ್ ನಿರಾಕರಿಸಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು