ಮಂಗಳವಾರ, ಡಿಸೆಂಬರ್ 7, 2021
20 °C

ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ ರಿಲಯನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆದಾಯ, ಲಾಭ ಮತ್ತು ಮಾರುಕಟ್ಟೆ ಬಂಡವಾಳದ ಲೆಕ್ಕಾಚಾರದಲ್ಲಿ ದೇಶದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ‘ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯಲ್ಲಿ 52ನೆಯ ಸ್ಥಾನ ಪಡೆದಿದೆ. ಭಾರತ ಮೂಲದ ಕಂಪನಿಯೊಂದು ಈ ಪಟ್ಟಿಯಲ್ಲಿ ಪಡೆದಿರುವ ಅತ್ಯುತ್ತಮ ಸ್ಥಾನ ಇದು.

ಫೋಬ್ಸ್‌ ಪತ್ರಿಕೆಯು ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಜಾಗತಿಕವಾಗಿ 750 ಕಂಪನಿಗಳಲ್ಲಿನ ಸ್ಥಿತಿಗತಿ ಪರಿಶೀಲಿಸಿ ಈ ಪಟ್ಟಿ ಸಿದ್ಧವಾಗಿದೆ. ಮೊದಲ ನೂರು ಕಂಪನಿಗಳ ಸಾಲಿನಲ್ಲಿ ಭಾರತದ ಐಸಿಐಸಿಐ ಬ್ಯಾಂಕ್ (65ನೇ ಸ್ಥಾನ), ಎಚ್‌ಡಿಎಫ್‌ಸಿ ಬ್ಯಾಂಕ್ (77), ಎಚ್‌ಸಿಎಲ್ ಟೆಕ್ನಾಲಜೀಸ್ (90) ಸ್ಥಾನ ಪಡೆದಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (119), ಎಲ್‌ಆ್ಯಂಡ್‌ಟಿ (127), ಎಲ್‌ಐಸಿ (504), ಇನ್ಫೊಸಿಸ್ (588), ಟಾಟಾ ಸಮೂಹ (746) ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಇತರ ಕೆಲವು ಕಂಪನಿಗಳು. ಉದ್ಯೋಗಿಗಳು ನೀಡಿದ ಮಾಹಿತಿ ಆಧರಿಸಿ ಈ ಪಟ್ಟಿ ಸಿದ್ಧಪಡಿಸಿರುವುದಾಗಿ ಫೋಬ್ಸ್ ಹೇಳಿದೆ.

ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅಮೆರಿಕದ ಐಬಿಎಂ, ಮೈಕ್ರೊಸಾಫ್ಟ್‌, ಅಮೆಜಾನ್, ಆ್ಯಪಲ್, ಆಲ್ಫಾಬೆಟ್ ಮತ್ತು ಡೆಲ್ ಟೆಕ್ನಾಲಜೀಸ್ ಇವೆ. ಚೀನಾದ ಹುಆವೆ 8ನೆಯ ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು