ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ: ವೃದ್ಧಿಸದ ವಿಶ್ವಾಸ

13 ನಗರಗಳಲ್ಲಿ ಸಮೀಕ್ಷೆ ನಡೆಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌
Last Updated 5 ಡಿಸೆಂಬರ್ 2020, 19:36 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಂಕಷ್ಟದಿಂದ ನಗರಗಳು ಸುಧಾರಣೆ ಕಾಣುತ್ತಿದ್ದರೂ, ದೇಶದ ಆರ್ಥಿಕತೆಯ ಚೇತರಿಕೆ ವಿಚಾರದಲ್ಲಿ ಗ್ರಾಹಕರ ವಿಶ್ವಾಸ 52.3ರಷ್ಟು ಇದೆ ಎಂಬುದು ಆರ್‌ಬಿಐ ಈಚೆಗೆ ನಡೆಸಿದ್ದ ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ.

ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳ 5,500 ಕುಟುಂಬಗಳನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಲಾಗಿತ್ತು.

ಬೆಲೆಯ ಮಟ್ಟ, ಕುಟುಂಬದ ಆದಾಯ, ಉದ್ಯೋಗ ಮುಂತಾದ ವಿಚಾರಗಳಲ್ಲಿ ನವೆಂಬರ್‌ ತಿಂಗಳಲ್ಲಿ ಗ್ರಾಹಕರ ವಿಶ್ವಾಸವು ಸ್ವಲ್ಪ ಏರಿಕೆಯಾಗಿದ್ದರೂ, ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ ಎಂದು ವರದಿ ಹೇಳಿದೆ. ಸಮೀಕ್ಷೆಯ ಮಾನದಂಡದ ಪ್ರಕಾರ 100ಕ್ಕಿಂತ ಕಡಿಮೆ ಅಂಕವು ನಿರಾಶಾಭಾವನೆ
ಯನ್ನು ವ್ಯಕ್ತಪಡಿಸುತ್ತದೆ.

ಅ.30ರಿಂದ ನ.12ರವರೆಗಿನ ಅವಧಿಯಲ್ಲಿ ನಡೆಸಿದ್ದ ಈ ಸಮೀಕ್ಷೆಯ ಪ್ರಕಾರ, ಕುಟುಂಬಗಳ ವಿವೇಚನಾ ವೆಚ್ಚವು ಶೇ 11ರಷ್ಟು ಸಂಕುಚಿತಗೊಂಡಿದೆ. ಮುಂದಿನ ಕೆಲವು ತಿಂಗಳುಗಳಲ್ಲೂ ಇದು ಆಶಾದಾಯಕವಾಗಿ ಕಾಣಿಸುತ್ತಿಲ್ಲ. ಆದರೆ ಒಂದು ವರ್ಷದ ನಂತರದ ಸ್ಥಿತಿ ಆಶಾದಾಯಕವಾಗಿದೆ ಎಂಬುದನ್ನು ಗ್ರಾಹಕರ ವಿಶ್ವಾಸ ಸಮೀಕ್ಷೆಯು ತಿಳಿಸಿದೆ.

ಬೆಲೆ ಪರಿಸ್ಥಿತಿಯ ಬಗ್ಗೆ 18 ನಗರಗಳ 6,000 ಕುಟುಂಬಗಳನ್ನು ಸಂಪರ್ಕಿಸಿ ನಡೆಸಿದ್ದ ಇನ್ನೊಂದು ಸಮೀಕ್ಷೆಯ ಪ್ರಕಾರ, ಮುಂದಿನ ಮೂರು ತಿಂಗಳಲ್ಲಿ ಸರಕು ಮತ್ತು ಸೇವೆಗಳ ಬೆಲೆಗಳು ಇನ್ನಷ್ಟು ಏರಿಕೆ ಆಗಲಿವೆ ಎಂದು ಕುಟುಂಬಗಳು ಭಾವಿಸಿವೆ. ಅಷ್ಟೇ ಅಲ್ಲ ಈ ವಿಚಾರದಲ್ಲಿ ಇನ್ನೂ ಒಂದು ವರ್ಷದವರೆಗೂ ಯಾವುದೇ ಆಶಾವಾದ ಹೊಂದಿಲ್ಲದಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT