ನವದೆಹಲಿ: ಚಿಲ್ಲರೆ ಹಣದುಬ್ಬರ ಪ್ರಮಾಣವು ಅಕ್ಟೋಬರ್ನಲ್ಲಿ ಶೇಕಡ 0.25ಕ್ಕೆ ಇಳಿಕೆಯಾಗಿದೆ. ಜನರು ನಿತ್ಯದ ಬದುಕಿನಲ್ಲಿ ಹೆಚ್ಚಾಗಿ ಬಳಕೆ ಮಾಡುವ ಸರಿಸುಮಾರು 380 ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು ಕಡಿಮೆ ಮಾಡಿದ್ದುದು ಕೂಡ ಹಣದುಬ್ಬರ ಇಳಿಕೆಗೆ ಒಂದು ಕಾರಣ ಎಂದು ತಜ್ಞರು ಹೇಳಿದ್ದಾರೆ.

ಅಲ್ಲದೆ, ತರಕಾರಿ, ಹಣ್ಣುಗಳು ಮತ್ತು ಮೊಟ್ಟೆ ಬೆಲೆಯು ಕಡಿಮೆ ಆಗಿರುವುದು ಕೂಡ ಹಣದುಬ್ಬರ ದರವನ್ನು ತಗ್ಗಿಸಿದೆ. ಅಕ್ಟೋಬರ್ನಲ್ಲಿ ದಾಖಲಾಗಿರುವ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು 2014ರ ಜನವರಿ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 1.44ರಷ್ಟು ಇತ್ತು. ಹಿಂದಿನ ವರ್ಷದ ಅಕ್ಟೋಬರ್ನಲ್ಲಿ ಇದು ಶೇ 6.21ರಷ್ಟು ಆಗಿತ್ತು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ಅಕ್ಟೋಬರ್ನಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ (–)5.02ರಷ್ಟು ಆಗಿತ್ತು.

ಹಣದುಬ್ಬರವು ಇಳಿಕೆ ಕಂಡಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಜಿಎಸ್ಟಿ ದರ ಪರಿಷ್ಕರಣೆಯೂ ಸೇರಿದೆ ಎಂದು ಎನ್ಎಸ್ಒ ಹೇಳಿದೆ. ಎಣ್ಣೆ ಮತ್ತು ಕೊಬ್ಬುಗಳು, ತರಕಾರಿಗಳು, ಹಣ್ಣುಗಳು, ಮೊಟ್ಟೆ, ಪಾದರಕ್ಷೆ, ಏಕದಳ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳು, ಸಾರಿಗೆ ಹಾಗೂ ಸಂವಹನ ವರ್ಗಗಳಲ್ಲಿ ಹಣದುಬ್ಬರ ಇಳಿಕೆ ಆಗಿದ್ದುದು ಕೂಡ ಒಂದು ಕಾರಣ ಎಂದು ಎನ್ಎಸ್ಒ ಹೇಳಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣವು (–)0.25 ಆಗಿದೆ. ನಗರ ಪ್ರದೇಶಗಳಲ್ಲಿ ಇದು ಶೇ 0.88ರ ಮಟ್ಟದಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಚಿಲ್ಲರೆ ಹಣದುಬ್ಬರದ ಅಂದಾಜು ಪ್ರಮಾಣವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ 2.6ರ ಮಟ್ಟದಿಂದ ತುಸು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಐಸಿಆರ್ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

‘ಸಮಿತಿಯು ಅಕ್ಟೋಬರ್ನಲ್ಲಿ ನಡೆಯಲಿರುವ ಸಭೆಯಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡುವುದಕ್ಕೆ ಹಣದುಬ್ಬರದ ಇಳಿಕೆಯು ಒತ್ತಾಸೆ ನೀಡುತ್ತದೆ. ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವು ಆಶ್ಚರ್ಯಕರ ಮಟ್ಟದಲ್ಲಿ ಏರಿಕೆ ಕಾಣದೆ ಇದ್ದರೆ, ರೆಪೊ ದರ ಇಳಿಕೆಯ ಸಾಧ್ಯತೆಗೆ ಬಲ ಬರುತ್ತದೆ’ ಎಂದು ಅದಿತಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್ಟಿ ದರ ಪರಿಷ್ಕರಣೆಯು ಸೆಪ್ಟೆಂಬರ್ ಕೊನೆಯಲ್ಲಿ ಜಾರಿಗೆ ಬಂತು. ಅದರ ಧನಾತ್ಮಕ ಪರಿಣಾಮವು ಅಕ್ಟೋಬರ್ನಲ್ಲಿ ಕಂಡುಬಂದಿದೆ ಎಂದು ಕೇರ್ಎಜ್ ರೇಟಿಂಗ್ಸ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ರಜನಿ ಸಿನ್ಹಾ ಹೇಳಿದ್ದಾರೆ.

‘ಹಣಕಾಸು ನೀತಿಗಳ ದೃಷ್ಟಿಯಿಂದ ಹೇಳುವುದಾದರೆ, ಹಣದುಬ್ಬರ ಕಡಿಮೆ ಆಗಿರುವುದು, ಆರ್ಥಿಕ ಬೆಳವಣಿಗೆಯ ಮೇಲೆ ಗಮನ ನೀಡಲು ಆರ್ಬಿಐಗೆ ಹೆಚ್ಚಿನ ಅವಕಾಶ ಮಾಡಿಕೊಡುತ್ತದೆ... ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಬೆಳವಣಿಗೆ ದರವು ಕಡಿಮೆ ಆದರೆ, ರೆಪೊ ದರ ಕಡಿತಕ್ಕೆ ಸಂದರ್ಭ ಸೃಷ್ಟಿಯಾಗುತ್ತದೆ’ ಎಂದು ಸಿನ್ಹಾ ಅವರು ಹೇಳಿದ್ದಾರೆ.

ಎಂಪಿಸಿ ಸಭೆಯು ಡಿಸೆಂಬರ್ 3ರಿಂದ 5ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.