₹ 12ರಷ್ಟು ಹೆಚ್ಚಿಸಬೇಕು ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗುತ್ತಿರುವ ಕಾರಣ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಲಾಭವೂ ಇಲ್ಲದ, ನಷ್ಟವೂ ಇಲ್ಲದ ಸ್ಥಿತಿ ತಲುಪಬೇಕು ಎಂದಾದರೆ ಮಾರ್ಚ್ 16ಕ್ಕೆ ಮೊದಲು ಅವುಗಳ ಬೆಲೆಯನ್ನು ಲೀಟರ್‌ಗೆ ₹ 12.1ರಷ್ಟು ಹೆಚ್ಚಿಸಬೇಕು ಎಂದು ಐಸಿಐಸಿಐ ಸೆಕ್ಯುರಿಟೀಸ್ ಅಂದಾಜಿಸಿದೆ.
ನಾಲ್ಕು ತಿಂಗಳುಗಳಿಂದ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿಲ್ಲ. ತೈಲ ಮಾರಾಟ ಕಂಪನಿಗಳ ಲಾಭಾಂಶವನ್ನೂ ಪರಿಗಣಿಸಿದರೆ ತೈಲೋತ್ಪನ್ನಗಳ ಬೆಲೆಯನ್ನು ಲೀಟರಿಗೆ ₹ 15.1ರವರೆಗೆ ಹೆಚ್ಚಿಸಬೇಕಾಗುತ್ತದೆ ಎಂದು ಐಸಿಐಸಿಐ ಸೆಕ್ಯುರಿಟೀಸ್‌ನ ವರದಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.