ನವದೆಹಲಿ: ಕಾರ್ಡ್ ಟೋಕನೈಸೇಷನ್ ವ್ಯವಸ್ಥೆ ಆಯ್ಕೆ ಮಾಡಿಕೊಂಡಿರುವ ರುಪೇ ಕಾರ್ಡ್ ಹೊಂದಿರುವ ಗ್ರಾಹಕರು ‘ಸಿವಿವಿ’ ಇಲ್ಲದೇ ವಹಿವಾಟು ನಡೆಸಬಹುದು ಎಂದು ರಾಷ್ಟ್ರೀಯ ಪಾವತಿಗಳ ನಿಗಮವು (ಎನ್‌ಪಿಸಿಐ) ಸೋಮವಾರ ಹೇಳಿದೆ.
ಪಾವತಿ ವೇಳೆ ‘ಸಿವಿವಿ’ ನಮೂದಿಸುವ ಅಗತ್ಯ ಇಲ್ಲದೇ ಇರುವುದರಿಂದ ಗ್ರಾಹಕರು ತಮ್ಮ ಬಳಿಯಲ್ಲಿ ಕಾರ್ಡ್ ಇಟ್ಟುಕೊಂಡಿರುವ ಅಥವಾ ಕಾರ್ಡ್‌ನ ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಪಾವತಿ ವಹಿವಾಟಿನ ಪಾಲುದಾರರು ‘ಟೋಕನ್’ ರೂಪದಲ್ಲಿ ಮಾತ್ರ ಸಂಗ್ರಹಿಸುವುದೇ ಟೋಕನೈಸೇಷನ್ ವ್ಯವಸ್ಥೆಯಾಗಿದೆ.