ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ: ಆಮದು ದುಬಾರಿ

Last Updated 15 ಜುಲೈ 2022, 14:15 IST
ಅಕ್ಷರ ಗಾತ್ರ

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯುತ್ತ ಇರುವುದು ಕಚ್ಚಾ ತೈಲ ಹಾಗೂ ಹಲವು ಸರಕುಗಳ ಆಮದು, ವಿದೇಶಗಳಲ್ಲಿ ವ್ಯಾಸಂಗ ಮತ್ತು ವಿದೇಶ ಪ್ರವಾಸವನ್ನು ದುಬಾರಿಯಾಗಿಸಲಿದೆ. ಅಲ್ಲದೆ, ದೇಶದಲ್ಲಿ ಹಣದುಬ್ಬರ ಪ್ರಮಾಣವು ಇನ್ನಷ್ಟು ಹೆಚ್ಚಾಗುವ ಆತಂಕ ಇದೆ.

ಆದರೆ, ರಫ್ತು ವಹಿವಾಟಿನಲ್ಲಿ ತೊಡಗಿರುವವರು ಹೆಚ್ಚಿನ ಆದಾಯ ಕಾಣಲಿದ್ದಾರೆ. ದೇಶವು ಕಚ್ಚಾ ತೈಲ, ಕಲ್ಲಿದ್ದಲು, ಪ್ಲಾಸ್ಟಿಕ್ ವಸ್ತುಗಳು, ರಾಸಾಯನಿಕಗಳು, ಎಲೆಕ್ಟ್ರಾನಿಕ್ ಸರಕುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಯಂತ್ರೋಪಕರಣಗಳು, ಚಿನ್ನ, ಮುತ್ತು, ಅಮೂಲ್ಯ ಹರಳುಗಳು, ಉಕ್ಕು ಮತ್ತು ಕಬ್ಬಿಣವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ.

‘ಅಡುಗೆ ಎಣ್ಣೆ ಸೇರಿದಂತೆ ಆಮದಾಗುವ ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಲಿದೆ. ಆದರೆ, ಅಡುಗೆ ಎಣ್ಣೆಗಳ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿರುವ ಕಾರಣ ರೂಪಾಯಿ ಮೌಲ್ಯ ಇಳಿಕೆಯ ಪರಿಣಾಮವು ಹೆಚ್ಚಿರಲಿಕ್ಕಿಲ್ಲ’ ಎಂದು ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಎಸ್‌ಇಎ) ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಹೇಳಿದ್ದಾರೆ.

‘ಆಮದು ಮಾಡಿಕೊಳ್ಳುವ ಸರಕುಗಳ ಬೆಲೆ ಹೆಚ್ಚಾಗಿ, ತಯಾರಿಕಾ ವೆಚ್ಚ ಜಾಸ್ತಿಯಾಗುತ್ತದೆ. ಉದ್ದಿಮೆಗಳು ಇದನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಆಗ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಏರಿಕೆ ಆಗುತ್ತದೆ’ ಎಂದು ರಫ್ತು ವಹಿವಾಟುದಾರರ ಒಕ್ಕೂಟ ಎಫ್‌ಐಇಒ ಮಹಾನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT