ಶನಿವಾರ, ಆಗಸ್ಟ್ 17, 2019
27 °C
ಕಳಪೆ ಆಹಾರ: ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ

ಗ್ರಾಹಕನಿಗೆ ₹1.10 ಲಕ್ಷ ಪರಿಹಾರ ನೀಡಲು ಆದೇಶ

Published:
Updated:

ಚೆನ್ನೈ: ಶರವಣ ಭವನ ಹೋಟೆಲ್‌ನಲ್ಲಿ ಕಳಪೆ ಆಹಾರ ಸೇವಿಸಿ ಆನಾರೋಗ್ಯಕ್ಕೀಡಾಗಿದ್ದ ಸುಪ್ರೀಂ ಕೋರ್ಟ್‌ ವಕೀಲ ರೊಬ್ಬರಿಗೆ ₹1.10ಲಕ್ಷ ಪರಿಹಾರ ನೀಡುವಂತೆ ಹೋಟೆಲ್‌ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಸೂಚಿಸಿದೆ.

ವಕೀಲ ಎಸ್.ಕೆ. ಸಾಮಿ ಅವರು 2014ರಲ್ಲಿ ಚೆನ್ನೈನ ಅಣ್ಣಾ ಸಲೈನಲ್ಲಿರುವ ಶರವಣ ಭವನ ಸಮೂಹದ ಹೋಟೆಲ್‌ನಲ್ಲಿ ಆಹಾರ ಸೇವಿಸಿದ್ದರು. ವಿಷಾಹಾರ ಸೇವನೆಯ ಪರಿಣಾಮ ಅವರಿಗೆ ಅನಾರೋಗ್ಯ ಕಾಡಿತ್ತು. ವಿಷಾಹಾರ ಸೇವನೆಯಿಂದ ಅನುಭವಿಸಿದ ಮಾನಸಿಕ ಸಂಕಟ ಮತ್ತು ಇತರ ಸಮಸ್ಯೆಗಳಿಗೆ ಗುರಿಯಾಗಿರುವುದಕ್ಕೆ ₹1 ಲಕ್ಷ ಹಾಗೂ ವ್ಯಾಜ್ಯದ ವೆಚ್ಚಕ್ಕೆ ₹10 ಸಾವಿರ ಪರಿಹಾರ ನೀಡುವಂತೆ ವೇದಿಕೆ ಸೂಚಿಸಿದೆ.

ಒಟ್ಟು ₹90 ಲಕ್ಷ ಪರಿಹಾರ ನೀಡಬೇಕೆಂದು ಕೋರಿ ಸಾಮಿ ಅವರು ವೇದಿಕೆ ಮೊರೆ ಹೋಗಿದ್ದರು.

Post Comments (+)