ನವದೆಹಲಿ: ‘ವಿವಿಧ ಸೇವೆಗಳಿಗೆ ಎಸ್ಬಿಐ ವಿಧಿಸುತ್ತಿರುವ ಶುಲ್ಕಗಳು ಬ್ಯಾಂಕಿಂಗ್ ಉದ್ಯಮದಲ್ಲಿಯೇ ಅತ್ಯಂತ ಕಡಿಮೆಯಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ ತಿಳಿಸಿದ್ದಾರೆ.

ಗ್ರಾಹಕರ ಹಿತರಕ್ಷಣೆ ಉದ್ದೇಶದಿಂದನಗದು ಠೇವಣಿ, ಎಟಿಎಂ ಒಳಗೊಂಡು ವಿವಿಧ ಸೇವೆಗಳಿಗೆ ಕಡಿಮೆ ಶುಲ್ಕ ನಿಗದಿಮಾಡಲಾಗಿದೆ ಎಂದಿದ್ದಾರೆ.

ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೇ ಇರುವ ಗ್ರಾಹಕರಿಗೆ ವಿಧಿಸುತ್ತಿರುವ ಶುಲ್ಕವನ್ನು ತಗ್ಗಿಸುವ ಚಿಂತನೆ ಇದೆಯೇ ಎನ್ನುವ ಪ್ರಶ್ನೆಗೆ, ‘ಮೂಲಸೌಕರ್ಯ ಮತ್ತು ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಹೂಡಿಕೆ ಮಾಡುತ್ತಿರುವಾಗ, ಅದಕ್ಕೆ ತಗಲುವ ವೆಚ್ಚದಲ್ಲಿ ಒಂದು ಭಾಗವನ್ನಾದರೂ ಮರಳಿ ಪಡೆಯುವುದು ಅನಿವಾರ್ಯವಾಗುತ್ತದೆ. ದಿನೇ ದಿನೇ ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಆದಷ್ಟೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಳಸುವಂತೆ ಗ್ರಾಹಕರಿಗೆ ಮನವಿ ಮಾಡಲಾಗುತ್ತಿದೆ. ಗ್ರಾಹಕರನ್ನು ಉತ್ತೇಜಿಸಲು ರಿವಾರ್ಡ್ ಪಾಯಿಂಟ್ ಸಹ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.