ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಹಬ್ಬದ ಕೊಡುಗೆಯ ಭಾಗವಾಗಿ ಶೇಕಡ 0.25ರವರೆಗೆ ರಿಯಾಯಿತಿ ದರದಲ್ಲಿ ಗೃಹ ಸಾಲ ನೀಡುವುದಾಗಿ ತಿಳಿಸಿದೆ. ಗೃಹ ಸಾಲದ ಬಡ್ಡಿದರವು ಶೇ 8.40ರಿಂದ ಆರಂಭ ಆಗಲಿದೆ.
ಗೃಹ ಸಾಲಗಳಿಗೆ 2023ರ ಜನವರಿ 31ರವರೆಗೆ ಯಾವುದೇ ಪ್ರಕ್ರಿಯೆ ಶುಲ್ಕ (ಪ್ರೊಸೆಸಿಂಗ್ ಫೀ) ಇರುವುದಿಲ್ಲ ಎಂದೂ ಹೇಳಿದೆ. ಟಾಪ್–ಅಪ್ ಲೋನ್ ಬಡ್ಡಿದರವು ಶೇ 8.80ರಿಂದ ಆರಂಭ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮೈಲಿಗಲ್ಲು: ತಾನು ನೀಡಿರುವ ಗೃಹ ಸಾಲದ ಮೊತ್ತವು ₹ 6 ಲಕ್ಷ ಕೋಟಿಯ ಗಡಿಯನ್ನು ದಾಟಿದೆ ಎಂದು ಬ್ಯಾಂಕ್ ತಿಳಿಸಿದೆ. ಗೃಹ ಸಾಲ ವಿಭಾಗದಲ್ಲಿ ಈ ಮೈಲಿಗಲ್ಲು ದಾಟಿರುವ ದೇಶದ ಮೊದಲ ಬ್ಯಾಂಕ್ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವುದಾಗಿ ಅದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.