ಎಸ್‌ಬಿಐ: ಗೃಹ, ವಾಹನ ಸಾಲ ತುಟ್ಟಿ

7

ಎಸ್‌ಬಿಐ: ಗೃಹ, ವಾಹನ ಸಾಲ ತುಟ್ಟಿ

Published:
Updated:

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶನಿವಾರದಿಂದಲೇ ಅನ್ವಯಿಸುವಂತೆ ಮೂರು ವರ್ಷಗಳವರೆಗಿನ ಅವಧಿ ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.2 ರಷ್ಟು ಹೆಚ್ಚಿಸಿದೆ.

ಇದರಿಂದ ಗೃಹ, ವಾಹನ ಮತ್ತು ಇತರೆ ಸಾಲಗಳ ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತದಲ್ಲಿ ಏರಿಕೆಯಾಗಲಿದೆ. 

ಬೇರೆ ಬ್ಯಾಂಕ್‌ಗಳು ಸಹ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವಾದ ರೆಪೊ ದರವನ್ನು ಹೆಚ್ಚಿಸಿದ ಒಂದು ತಿಂಗಳ ನಂತರ ಎಸ್‌ಬಿಐ ತನ್ನ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿದರವನ್ನು ಹೆಚ್ಚಿಸಿದೆ. 

ಆರ್‌ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು ಶೇ 0.25 ರಷ್ಟು ಹೆಚ್ಚಿಸಿತ್ತು. ಇದರಿಂದ ಸಾಲ ನೀಡಿಕೆ ದರವು ಶೇ 6.5ಕ್ಕೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !