ನವದೆಹಲಿ (ಪಿಟಿಐ): ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರೆಲ್ಲ ತಮ್ಮ ಪ್ಯಾನ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಮಾರ್ಚ್ ಅಂತ್ಯದೊಳಗೆ ಜೋಡಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಬುಧವಾರ ಸೂಚಿಸಿದೆ.
ಇದನ್ನು ಮಾಡದೆ ಇದ್ದರೆ, ಅಂತಹ ಹೂಡಿಕೆದಾರರನ್ನು ಕೆವೈಸಿ ಪೂರ್ಣಗೊಳಿಸದವರು ಎಂದು ಪರಿಗಣಿಸಲಾಗುತ್ತದೆ. ಅವರು ಆಧಾರ್ ಹಾಗೂ ಪ್ಯಾನ್ ಸಂಖ್ಯೆ ಜೋಡಿಸುವವರೆಗೆ ಅವರ ವಹಿವಾಟುಗಳ ಮೇಲೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಸೆಬಿ ಹೇಳಿದೆ.
ಆಧಾರ್ ಜೊತೆ ಜೋಡಣೆ ಆಗದೆ ಇದ್ದರೆ ಪ್ಯಾನ್ ಸಂಖ್ಯೆಯು 2023ರ ಮಾರ್ಚ್ 31ರ ನಂತರ ನಿಷ್ಕ್ರಿಯವಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯು (ಸಿಬಿಡಿಟಿ) ಹಿಂದಿನ ವರ್ಷದ ಮಾರ್ಚ್‌ನಲ್ಲಿ ಹೇಳಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.