ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ | ಮತ್ತೆ ಕರಡಿ ಕುಣಿತ: ಹೂಡಿಕೆದಾರರ ಸಂಪತ್ತು ₹ 5.82 ಲಕ್ಷ ಕೋಟಿ ನಷ್ಟ

Last Updated 4 ಮೇ 2020, 19:45 IST
ಅಕ್ಷರ ಗಾತ್ರ

ಮುಂಬೈ: ಷೇರುಗಳಲ್ಲಿ ಭಾರಿ ಮಾರಾಟ ಒತ್ತಡ ಕಂಡು ಬಂದಿದ್ದರಿಂದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ₹ 5.82 ಲಕ್ಷ ಕೋಟಿ ಮೊತ್ತದ ಸಂಪತ್ತು ಕರಗಿ ಹೋಗಿದೆ.

ಪೇಟೆಯ ಮಾರುಕಟ್ಟೆ ಮೌಲ್ಯ ಈಗ 123.58 ಲಕ್ಷ ಕೋಟಿಗೆ ಇಳಿದಿದೆ. ಐಸಿಐಸಿಐ ಬ್ಯಾಂಕ್‌ ಷೇರು ಗರಿಷ್ಠ ಶೇ 11ರಷ್ಟು ಕುಸಿತ ಕಂಡಿದೆ. ನಂತರದ ಸ್ಥಾನದಲ್ಲಿ ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ಗಳಿವೆ. ಸೂಚ್ಯಂಕದಲ್ಲಿನ ಭಾರ್ತಿ ಏರ್‌ಟೆಲ್‌ ಮತ್ತು ಸನ್‌ ಫಾರ್ಮಾ ಮಾತ್ರ ಗಳಿಕೆ ಕಂಡಿವೆ.

ತೀವ್ರ ಏರಿಳಿತದಿಂದ ಕೂಡಿದ್ದ ಪೇಟೆಯ ವಹಿವಾಟು ಅಂತಿಮವಾಗಿ 2,002.27 ಅಂಶಗಳನ್ನು ಕಳೆದುಕೊಂಡು 31,715.35 ಅಂಶಗಳಲ್ಲಿ ಅಂತ್ಯ ಕಂಡಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 566 ಅಂಶಗಳಿಗೆ ಎರವಾಗಿ 9,293 ಅಂಶಗಳಲ್ಲಿ ಕೊನೆಗೊಂಡಿತು.

ರೂಪಾಯಿ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆಯು 64 ಪೈಸೆ ಕುಸಿತ ಕಂಡು ₹ 75.73ಕ್ಕೆ ಇಳಿದಿದೆ.

ಕಚ್ಚಾ ತೈಲ: ಕಚ್ಚಾ ತೈಲ ಬೆಲೆಯ ಜಾಗತಿಕ ಮಾನದಂಡವಾಗಿರುವ ಬ್ರೆಂಟ್‌ನ ವಾಯಿದಾ ಬೆಲೆಯು ಶೇ 2.95ರಷ್ಟು ಕಡಿಮೆಯಾಗಿ ಪ್ರತಿ ಬ್ಯಾರಲ್‌ಗೆ 25.66 ಡಾಲರ್‌ಗೆ ನಿಗದಿಯಾಗಿದೆ.

ಸೂಚ್ಯಂಕ ಪತನದ ಕಾರಣಗಳು
*
ಅಮೆರಿಕ ಮತ್ತು ಚೀನಾ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ
*ಮೂರನೇ ಬಾರಿಗೆ ದಿಗ್ಬಂಧನ ವಿಸ್ತರಣೆ
*ದೇಶಿ ತಯಾರಿಕಾ ಚಟುವಟಿಕೆಗಳ ಪ್ರಗತಿ ಕುಸಿತ
*ನಿರಾಶೆ ಮೂಡಿಸಿರುವ ಕಾರ್ಪೊರೇಟ್‌ಗಳ ಹಣಕಾಸು ಸಾಧನೆ
*ಏಪ್ರಿಲ್‌ನಲ್ಲಿ ವಾಹನಗಳ ಶೂನ್ಯ ಮಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT