ಶುಕ್ರವಾರ, ಜನವರಿ 22, 2021
21 °C

ಸೆನ್ಸೆಕ್ಸ್ ದಾಖಲೆ ಮುಂದುವರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಸತತ 10ನೆಯ ದಿನವೂ ಏರು ಹಾದಿಯಲ್ಲಿ ಸಾಗಿದ ಸೆನ್ಸೆಕ್ಸ್‌ ಮಂಗಳವಾರ ದಾಖಲೆಯ ಮಟ್ಟವನ್ನು ತಲುಪಿತು. ಐ.ಟಿ. ವಲಯದ ಷೇರುಗಳ ಖರೀದಿಯು ಜೋರಾಗಿದ್ದ ಪರಿಣಾಮ ಸೆನ್ಸೆಕ್ಸ್‌ 260 ಅಂಶ ಏರಿಕೆ ಕಂಡು, 48,437 ಅಂಶಗಳಲ್ಲಿ ಕೊನೆಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, 66 ಅಂಶ ಏರಿಕೆ ಕಂಡು 14,199ರಲ್ಲಿ ಕೊನೆಗೊಂಡಿತು. ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಇಂಡಸ್ ಇಂಡ್ ಬ್ಯಾಂಕ್, ಟಿಸಿಎಸ್, ಏಷ್ಯನ್ ಪೇಂಟ್ಸ್, ಎಚ್‌ಸಿಎಲ್‌ ಟೆಕ್, ಟೈಟಾನ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡವು.

ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಮಹೀಂದ್ರ ಆ್ಯಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಕುಸಿತ ದಾಖಲಿಸಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು