ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆನ್ಸೆಕ್ಸ್ 770 ಅಂಶ ಕುಸಿತ

ಬಡ್ಡಿದರ ಹೆಚ್ಚಳ ಆತಂಕ: ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ
Last Updated 1 ಸೆಪ್ಟೆಂಬರ್ 2022, 13:54 IST
ಅಕ್ಷರ ಗಾತ್ರ

ಮುಂಬೈ: ವಿವಿಧ ಕೇಂದ್ರೀಯ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಕೆಗೆ ಮುಂದಾಗಿವೆ. ಇದು ಹೂಡಿಕೆದಾರರಲ್ಲಿ ಆತಂಕಕ್ಕೆ ದೂಡಿದ್ದು, ಭಾರತವನ್ನೂ ಒಳಗೊಂಡು ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳು ಗುರುವಾರ ಕುಸಿತ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 770 ಅಂಶ ಕುಸಿತ ಕಂಡು, 58,766 ಅಂಶಗಳಿಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 216 ಅಂಶ ಇಳಿಕೆಯಾಗಿ 17,542 ಅಂಶಗಳಿಗೆ ಇಳಿಕೆ ಕಂಡಿದೆ.

ಕೇಂದ್ರ ಸರ್ಕಾರವು ಡೀಸೆಲ್‌, ಎಟಿಎಫ್‌ ರಫ್ತು ಮೇಲೆ ಹಾಗೂ ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲೆ ತೆರಿಗೆ ಹೆಚ್ಚಳ ಮಾಡಿರುವುದರಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್‌ ಷೇರು ಮೌಲ್ಯವು ಶೇ 2.99ರಷ್ಟು ಹೆಚ್ಚಿನ ನಷ್ಟ ಕಂಡಿತು.

‘ಷೇರುಪೇಟೆಗಳು ಕಳೆದ ಕೆಲವು ದಿನಗಳಿಂದ ಹೆಚ್ಚಿನ ಏರಿಳಿತ ಕಾಣುತ್ತಿವೆ. ಹೀಗಿದ್ದರೂ ಜಿಡಿಪಿ ಬೆಳವಣಿಗೆ ಮತ್ತು ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವಿನಿಂದಾಗಿ ಸೂಚ್ಯಂಕಗಳು ಹೆಚ್ಚಿನ ಕುಸಿತ ಕಾಣುವುದು ತಪ್ಪಿತು’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸ್‌ ಲಿಮಿಟೆಡ್‌ನ ರಿಟೇಲ್‌ ರಿಸರ್ಚ್‌ ಮುಖ್ಯಸ್ಥ ಸಿದ್ದಾರ್ಥ್‌ ಖೇಮ್ಕಾ ಹೇಳಿದ್ದಾರೆ.

ಬಿಎಸ್‌ಇನಲ್ಲಿ ವಲಯವಾರು ಇಂಧನ ಶೇ 1.99, ತೈಲ ಮತ್ತು ಅನಿಲ ಶೇ 1.77, ಐಟಿ ಶೇ 1.68, ಲೋಹ ಶೇ 1.56, ಟೆಕ್ ಶೇ 1.41ರಷ್ಟು ಇಳಿಕೆ ಕಂಡಿವೆ.

ಏಷ್ಯಾದಲ್ಲಿ, ಸೋಲ್‌, ಟೋಕಿಯೊ, ಹಾಂಗ್‌ಕಾಂಗ್‌ ಮತ್ತು ಶಾಂಘೈ ಷೇರುಪೇಟೆಗಳು ಇಳಿಮುಖವಾಗಿ ವಹಿವಾಟು ಅಂತ್ಯಗೊಳಿಸಿದವು.

ಬ್ರೆಂಟ್ ಕಚ್ಚಾ ತೈಲ ದರ ಶೇ 2ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 93.73 ಡಾಲರ್‌ಗೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT