ಶನಿವಾರ, ಮೇ 28, 2022
27 °C

ಗಳಿಕೆಯ ಹಾದಿಗೆ ಮರಳಿದ ಷೇರುಪೇಟೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎರಡು ದಿನಗಳಿಂದ ಇಳಿಮುಖವಾಗಿದ್ದ ಷೇರುಪೇಟೆ ಸಂವೇದಿ ಸೂಚ್ಯಂಕಗಳು ಶುಕ್ರವಾರ ಮತ್ತೆ ಗಳಿಕೆಯ ಹಾದಿಗೆ ಮರಳಿದವು. ಹೂಡಿಕೆದಾರರು ಹಣಕಾಸು, ಔಷಧ ಮತ್ತು ಐ.ಟಿ. ವಲಯದ ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡಿದರು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 358 ಅಂಶ ಏರಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 102 ಅಂಶ ಏರಿಕೆ ಕಂಡಿತು. ಬಜಾಜ್ ಫೈನಾನ್ಸ್ ಷೇರುಗಳು ಶೇಕಡ 7.29ರಷ್ಟು ಗಳಿಕೆ ಕಂಡವು. ಬಜಾಜ್ ಫಿನ್‌ಸರ್ವ್‌, ಎಸ್‌ಬಿಐ, ಇಂಡಸ್‌ ಇಂಡ್‌ ಬ್ಯಾಂಕ್, ಡಾ ರೆಡ್ಡೀಸ್, ಟೆಕ್ ಮಹೀಂದ್ರ, ಐಟಿಸಿ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ಗಳಿಕೆ ದಾಖಲಿಸಿದವು.

ಬಜಾಜ್ ಆಟೊ, ಮಾರುತಿ, ಎಚ್‌ಸಿಎಲ್‌ ಟೆಕ್, ಅಲ್ಟ್ರಾಟೆಕ್‌ ಸಿಮೆಂಟ್, ಪವರ್‌ಗ್ರಿಡ್, ಒಎನ್‌ಜಿಸಿ ಮತ್ತು ನೆಸ್ಲೆ ಷೇರುಗಳು ಇಳಿಕೆ ಕಂಡವು. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 9 ಪೈಸೆ ಕಡಿಮೆ ಆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು