ಶಾರ್ಪ್‌: ಏರ್‌ ಕಂಡಿಷನರ್‌ ಮಾರಾಟ

ಬುಧವಾರ, ಮಾರ್ಚ್ 27, 2019
26 °C

ಶಾರ್ಪ್‌: ಏರ್‌ ಕಂಡಿಷನರ್‌ ಮಾರಾಟ

Published:
Updated:

ಬೆಂಗಳೂರು: ಜಪಾನಿನ ಶಾರ್ಪ್‌ ಕಾರ್ಪೊರೇಷನ್‌, ತನ್ನ ಪ್ಲಾಸ್ಮಾಕ್ಲಸ್ಟರ್‌ ತಂತ್ರಜ್ಞಾನದ ಏರ್‌ಕಂಡಿಷನರ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಿದೆ.

ಈ ಉದ್ದೇಶಕ್ಕೆ ಎಲ್‌ಟೆಕ್‌ ಅಪ್ಲೈಯನ್ಸಸ್‌ ಪ್ರೈವೇಟ್‌ ಲಿಮಿಟೆಡ್‌ (ಇಎಪಿಎಲ್‌) ಜತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ತಕ್ಷಣಕ್ಕೆ ಜಾರಿಗೆ ಬರಲಿದೆ. ಕಲುಷಿತ ವಾತಾವರಣದಲ್ಲಿನ ಸೂಕ್ಷ್ಮಜೀವಿ ಮತ್ತು ಅಲರ್ಜಿಗೆ ಕಾರಣವಾಗುವ ಸೂಕ್ಷ್ಮ ಕಣಗಳನ್ನು ಬೇರ್ಪಡಿಸಿ ಶುದ್ಧ ಗಾಳಿ ಒದಗಿಸುವ ಪ್ಲಾಸ್ಮಾಕ್ಲಸ್ಟರ್‌ ತಂತ್ರಜ್ಞಾನ ಬಳಸಿ ಈ ಏರ್‌ಕಂಡಿಷನರ್‌ಗಳನ್ನು ತಯಾರಿಸಲಾಗಿದೆ..

‘ಭಾರತದ ಮಾರುಕಟ್ಟೆಯಲ್ಲಿ ಏರ್‌ಕಂಡಿಷನರ್‌ಗಳ ಮಾರಾಟ ಗಮನಾರ್ಹವಾಗಿ ಬೆಳೆಯುತ್ತಿದೆ. ಈ ಒಪ್ಪಂದವು ಎರಡೂ ಸಂಸ್ಥೆಗಳಿಗೆ ಲಾಭದಾಯಕವಾಗಿರಲಿದೆ’ ಎಂದು ಶಾರ್ಪ್‌ನ ಜಾಗತಿಕ ಆರೋಗ್ಯ ವಿಭಾಗದ ಉಪಾಧ್ಯಕ್ಷ ನಕಶಿಮಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !