ಗುರುವಾರ , ಜುಲೈ 29, 2021
20 °C

ರಿಲಯನ್ಸ್‌ ಜಿಯೊದಲ್ಲಿ ಮತ್ತೆ ₹4,546 ಕೋಟಿ ಹೂಡಿಕೆ ಮಾಡಿದ ಸಿಲ್ವರ್‌ ಲೇಕ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಿಲಯನ್ಸ್ ಜಿಯೊ ಡಿಜಿಟಲ್‌

ಮುಂಬೈ: ಅಮೆರಿಕ ಮೂಲಕ ಖಾಸಗಿ ಈಕ್ವಿಟಿ ಸಂಸ್ಥೆ ಸಿಲ್ವರ್‌ ಲೇಕ್ ರಿಲಯನ್ಸ್‌ ಇಂಡಸ್ಟ್ರೀಸ್‌ನ ಜಿಯೊ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತೆ ₹4,546.80 ಕೋಟಿ ಹೂಡಿಕೆ ಮಾಡಿದೆ.

ಈ ಮೂಲಕ ಜಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಲ್ವರ್‌ ಲೇಕ್‌ ಒಟ್ಟು ಹೂಡಿಕೆ ₹10,202.55 ಕೋಟಿ ಆಗಿದ್ದು, ಕಂಪನಿಯಲ್ಲಿ ಷೇರು ಶೇ 2.08ಕ್ಕೆ ಏರಿಕೆಯಾಗಿದೆ. ಮೇ 4ರಂದು ಸಿಲ್ವರ್‌ ಲೇಕ್‌ ಜಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ₹5,655.75 ಕೋಟಿ ಹೂಡಿಕೆ ಮಾಡಿತ್ತು.

ರಿಲಯನ್ಸ್‌ ಆರು ವಾರಗಳಲ್ಲಿ ಆರನೇ ಒಪ್ಪಂದಕ್ಕೆ ಮುಂದಾಗಿದೆ. ಅಬು–ಧಾಬಿ ಮೂಲದ ಮುಬದಲಾ ಹೂಡಿಕೆ ಸಂಸ್ಥೆ ಜಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ₹9,093.60 ಕೋಟಿ ಹೂಡಿಕೆ ಮಾಡಲಿದೆ ಎಂದು ಶುಕ್ರವಾರ ರಿಲಯನ್ಸ್‌ ಪ್ರಕಟಿಸಿತ್ತು. ಈಗಾಗಲೇ ಫೇಸ್‌ಬುಕ್‌, ಸಿಲ್ವರ್‌ ಲೇಕ್‌, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್‌, ಜನರಲ್‌ ಅಟ್ಲಾಂಟಿಕ್‌, ಕೆಕೆಆರ್‌ ಹೂಡಿಕೆ ಸಂಸ್ಥೆ ಪಾಲು ಖರೀದಿ ಒಪ್ಪಂದ ಮಾಡಿಕೊಂಡಿವೆ.

ಜಿಯೊ ಪ್ಲಾಟ್‌ಫಾರ್ಮ್‌ಗಳಿಗೆ ಒಟ್ಟು ₹92,202.15 ಕೋಟಿ ಹೂಡಿಕೆಯಾದಂತಾಗಿದೆ. ಇದರೊಂದಿಗೆ ರಿಲಯನ್ಸ್‌ ₹53,125 ಕೋಟಿ ಮೌಲ್ಯದ ಹಕ್ಕಿನ ಷೇರುಗಳ ವಿತರಣೆ ನಡೆಸಿ ಹಣ ಸಂಗ್ರಹಿಸುತ್ತಿದೆ. 2021ರ ಮಾರ್ಚ್‌ ವೇಳೆಗೆ ಸಾಲ ಮುಕ್ತವಾಗಲು ರಿಲಯನ್ಸ್‌ ಯೋಜನೆ ರೂಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು