ನವದೆಹಲಿ: ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,156 ಅಂಶಗಳಷ್ಟು ಕುಸಿತವಾಗಿದೆ. ಇದರಿಂದ ಪ್ರಮುಖ ಆರು ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹1.40 ಲಕ್ಷ ಕೋಟಿ ಕರಗಿದ್ದರೆ, ಉಳಿದ ನಾಲ್ಕು ಕಂಪನಿಗಳ ಮೌಲ್ಯವು ಏರಿಕೆಯಾಗಿದೆ.

2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಟಿಸಿಎಸ್ ಮತ್ತು ಇನ್ಫೊಸಿಸ್‌ನ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ. ಆದರೆ, 2024–25ನೇ ಆರ್ಥಿಕ ವರ್ಷದ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಲಾಭದಲ್ಲಿ ಏರಿಕೆಯಾಗಿಲ್ಲ. ಹಾಗಾಗಿ, ಈ ಕಂಪನಿಯ ಷೇರಿನ ಮೌಲ್ಯ ಕುಸಿದಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ₹62,538 ಕೋಟಿ, ಇನ್ಫೊಸಿಸ್ ₹30,488 ಕೋಟಿ, ಐಸಿಐಸಿಐ ಬ್ಯಾಂಕ್ ₹26,423 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ₹14,234 ಕೋಟಿ, ಐಟಿಸಿ ₹6,616 ಕೋಟಿ ಮತ್ತು ಹಿಂದುಸ್ತಾನ್ ಯೂನಿಲಿವರ್‌ನ ಮಾರುಕಟ್ಟೆ ಮೌಲ್ಯವು ₹176 ಕೋಟಿ ಕಡಿಮೆಯಾಗಿದೆ.

ಭಾರ್ತಿ ಏರ್‌ಟೆಲ್ ₹37,797 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್ ₹9,420 ಕೋಟಿ, ರಿಲಯನ್ಸ್ ಇಂಡಸ್ಟ್ರೀಸ್ ₹4,397 ಕೋಟಿ ಮತ್ತು ಎಲ್‌ಐಸಿಯ ಎಂ–ಕ್ಯಾಪ್‌ಗೆ ₹1,201 ಕೋಟಿ ಸೇರ್ಪಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.