ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ: ಸ್ಕೋಡಾ ಸ್ಲಾವಿಯಾ ತಯಾರಿಕೆ ಆರಂಭ

Last Updated 21 ಜನವರಿ 2022, 11:47 IST
ಅಕ್ಷರ ಗಾತ್ರ

ನವದೆಹಲಿ: ಪುಣೆಯ ಚಾಕನ್‌ ಘಟಕದಲ್ಲಿ ತನ್ನ ಪ್ರೀಮಿಯಂ ಸೆಡಾನ್‌ ‘ಸ್ಲಾವಿಯಾ’ ತಯಾರಿಕೆ ಆರಂಭಿಸಿರುವುದಾಗಿ ಸ್ಕೋಡಾ ಆಟೊ ಇಂಡಿಯಾ ಕಂಪನಿಯು ಶುಕ್ರವಾರ ತಿಳಿಸಿದೆ.

2022ರ ಮೊದಲ ತ್ರೈಮಾಸಿಕದಲ್ಲಿ ಈ ಕಾರು ಮಾರುಕಟ್ಟೆ ಪ್ರವೇಶಿಸಲಿದ್ದು, 3 ಸಿಲಿಂಡರ್‌ 1 ಲೀಟರ್‌ ಹಾಗೂ 4 ಸಿಲಿಂಡರ್ 1.5 ಲೀಟರಿನ ಎರಡು ರೀತಿಯ ಪೆಟ್ರೋಲ್ ಎಂಜಿನ್‌ ಆಯ್ಕೆಗಳನ್ನು ಈ ಸೆಡಾನ್‌ ಹೊಂದಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಫೋಕ್ಸ್‌ವ್ಯಾಗನ್‌ ಸಮೂಹದ ಭಾರತ 2.0 ಯೋಜನೆ ಅಡಿಯಲ್ಲಿ ಬರುತ್ತಿರುವ ಎರಡನೇ ವಾಹನ ಇದಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಕಾರು ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರವೇಟ್‌ ಲಿಮಿಟೆಡ್‌ನ ಅಧ್ಯಕ್ಷ ಕ್ರಿಸ್ಟಿನ್‌ ಹೇಳಿದ್ದಾರೆ.

ಭಾರತದ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಸೆಡಾನ್‌ಗಳಾದ ಹೋಂಡಾ ಸಿಟಿ, ಹುಂಡೈ ವರ್ನಾ ಮತ್ತು ಮಾರುತಿ ಸಿಯಾಜ್‌ಗೆ ಪೈಪೋಟಿ ನೀಡುವ ನಿರೀಕ್ಷೆ ಮಾಡಲಾಗಿದೆ.

2021ರ ನವೆಂಬರ್‌ನಲ್ಲಿ ಕಂಪನಿಯು ಈ ಮಾದರಿಯನ್ನು ಅನಾವರಣ ಮಾಡಿದ್ದು, ಈ ಮೂಲಕ ತನ್ನ ಜಾಗತಿಕ ಮಾರಾಟವನ್ನು ಒಂದು ವರ್ಷದಲ್ಲಿ 15 ಲಕ್ಷಕ್ಕೆ ತಲುಪಿಸುವ ಗುರಿಯನ್ನು ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT