ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ: ಉಳಿತಾಯ ಖಾತೆ ಬಡ್ಡಿ ದರ ಶೇ 2.75ಕ್ಕೆ ಇಳಿಕೆ

Last Updated 7 ಏಪ್ರಿಲ್ 2020, 15:32 IST
ಅಕ್ಷರ ಗಾತ್ರ

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಉಳಿತಾಯ ಖಾತೆಯ ಬಡ್ಡಿ ದರವನ್ನು ಶೇ 0.25ರಷ್ಟು ಕಡಿತ ಮಾಡಿ ಶೇ 2.75ಕ್ಕೆ ಇಳಿಸಿದೆ.

ಹೊಸ ದರ ಇದೇ 15ರಿಂದ ಜಾರಿಗೆ ಬರಲಿದೆ. ಹಣಕಾಸು ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಹರಿವು ಇರುವುದರಿಂದ ಬಡ್ಡಿ ದರ ಮರು ಹೊಂದಾಣಿಕೆ ಮಾಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಎಂಸಿಎಲ್‌ಆರ್‌ ದರ: ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಎಲ್ಲ ಅವಧಿಯ ಬಡ್ಡಿ ದರವನ್ನೂ ಶೇ 0.35ರಷ್ಟು ಇಳಿಸಲಾಗಿದೆ. ಹೊಸ ದರವುಇದೇ 10ರಿಂದ ಅನ್ವಯವಾಗಲಿದೆ.

ಒಂದು ವರ್ಷದ ‘ಎಂಸಿಎಲ್‌ಆರ್‌’ ಈಗ ಶೇ 7.75 ರಿಂದ ಶೇ 7.40ಕ್ಕೆ ಇಳಿದಿದೆ. ಇದರಿಂದಾಗಿ ‘ಎಂಸಿಎಲ್‌ಆರ್‌’ ಆಧರಿಸಿದ ಗೃಹ ಸಾಲದ ಮಾಸಿಕ ಸಮಾನ ಕಂತು (ಇಎಂಐ) ಕಡಿಮೆಯಾಗಲಿದೆ. 30 ವರ್ಷಗಳ ಅವಧಿಯ ಗೃಹ ಸಾಲದ ಕಂತು ಪ್ರತಿ ₹1 ಲಕ್ಷಕ್ಕೆ ₹24ರಂತೆ ಕಡಿಮೆಯಾಗಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT