ಸೋಮವಾರ, ಏಪ್ರಿಲ್ 19, 2021
32 °C

ದೇಶಿ ಕಾರ್ಯಾಚರಣೆ ವಿಸ್ತರಣೆಗೆ 66 ಹೊಸ ವಿಮಾನ: ಸ್ಪೈಸ್‌ಜೆಟ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಸ್ಪೈಸ್‌ ಜೆಟ್‌ ಕಂಪನಿಯು ತನ್ನ ದೇಶಿ ಕಾರ್ಯಾಚರಣೆಯನ್ನು ವಿಸ್ತರಿಸಲು ಉದ್ದೇಶಿಸಿದೆ.  ಇದೇ ತಿಂಗಳ 28ರಿಂದ ಕೆಲವು ಮಾರ್ಗಗಳಲ್ಲಿ ಹೆಚ್ಚುವರಿ ಸೇವೆಗಳನ್ನೂ ಒಳಗೊಂಡು ಹೊಸ 66 ವಿಮಾನಗಳು ಹಾರಾಟ ಆರಂಭಿಸಲಿವೆ ಎಂದು ತಿಳಿಸಿದೆ.

ಮಹಾನಗರ ಮತ್ತು ಮಹಾನಗರೇಯತರ ಭಾಗಗಳಲ್ಲಿ ಈ ಹೊಸ ವಿಮಾನಗಳು ಸೇವೆ ಆರಂಭಿಸಲಿವೆ ಈ ಮೂಲಕ ಸ್ಥಳೀಯ ಸಂಪರ್ಕ ವಿಸ್ತರಣೆಯ ನಮ್ಮ ಬದ್ಧತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಸಿಸಿಒ ಶಿಲ್ಪಾ ಭಾಟಿಯಾ ತಿಳಿಸಿದ್ದಾರೆ.

ಉಡಾನ್‌ ಯೋಜನೆಯಡಿ ಸ್ಪೈಸ್‌ಜೆಟ್‌ ಕಂಪನಿಯು ಸಣ್ಣ ನಗರಗಳ ಪ್ರಯಾಣ ಬೇಡಿಕೆಯನ್ನು ಈಡೇರಿಸುತ್ತಿದೆ. ಅಹಮದಾಬಾದ್‌–ದರ್ಭಂಗ್–ಅಹಮದಾಬಾದ್‌, ಹೈದರಾಬಾದ್‌–ದರ್ಭಂಗ್–ಹೈದರಾಬಾದ್‌, ಪುಣೆ–ದರ್ಭಂಗ್‌–ಪುಣೆ, ಕೋಲ್ಕತ್ತ–ದರ್ಭಂಗ್‌–ಕೋಲ್ಕತ್ತ ಮಾರ್ಗಗಳಲ್ಲಿ ಹೊಸ ವಿಮಾನಗಳು ಸೇವೆ ಕಾರ್ಯಾಚರಿಸಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು