ನವದೆಹಲಿ: ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಶುರೆನ್ಸ್ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ನವೆಂಬರ್ 30ರಂದು ಆರಂಭ ಆಗಲಿದ್ದು, ಪ್ರತಿ ಷೇರಿನ ಬೆಲೆಯನ್ನು ₹ 870–₹ 900ರಂತೆ ನಿಗದಿ ಮಾಡಿರುವುದಾಗಿ ಕಂಪನಿ ಬುಧವಾರ ಹೇಳಿದೆ.

ಐಪಿಒ ಮೂಲಕ ₹ 7,249 ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ. ನವೆಂಬರ್ 30ರಂದು ಐಪಿಒ ಆರಂಭ ಆಗಲಿದ್ದು ಡಿಸೆಂಬರ್ 2ರಂದು ಮುಕ್ತಾಯವಾಗಲಿದೆ. ಆರಂಭಿಕ ಹೂಡಿಕೆದಾರರಿಗೆ (ಆ್ಯಂಕರ್ ಇನ್‌ವೆಸ್ಟರ್ಸ್) ನವೆಂಬರ್ 29ರಂದು ಬಿಡ್ ಸಲ್ಲಿಸಲು ಅವಕಾಶ ಇರಲಿದೆ ಎಂದು ಕಂಪನಿಯು ತಿಳಿಸಿದೆ.

ಶೇಕಡ 75ರಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯುಐಬಿ), ಶೇ 15ರಷ್ಟು ಷೇರುಗಳನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಹಾಗೂ ಉಳಿದ ಶೇ 10ರಷ್ಟು ಷೇರುಗಳನ್ನು ಸಣ್ಣ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.