ಸಕ್ಕರೆ ಉತ್ಪಾದನೆ ಶೇ 31ರಷ್ಟು ಹೆಚ್ಚಳ

ನವದೆಹಲಿ: 2020–21ನೇ ಮಾರುಕಟ್ಟೆ ವರ್ಷದ ಮೂರೂವರೆ ತಿಂಗಳಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇಕಡ 31ರಷ್ಟು ಹೆಚ್ಚಾಗಿದ್ದು, 142.70 ಲಕ್ಷ ಟನ್ಗಳಿಗೆ ತಲುಪಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್ಎಂಎ) ಹೇಳಿದೆ.
2019–20ನೇ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 108.94 ಲಕ್ಷ ಟನ್ಗಳಷ್ಟು ಸಕ್ಕರೆ ಉತ್ಪಾದನೆ ಆಗಿತ್ತು.
ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಉತ್ತರಪ್ರದೇಶ ರಾಜ್ಯದಲ್ಲಿ ಜನವರಿ 15ರವರೆಗೆ ಸಕ್ಕರೆ ಉತ್ಪಾದನೆ 42.99 ಲಕ್ಷ ಟನ್ಗಳಷ್ಟಿದೆ. ಹಿಂದಿನ ಅವಧಿಯಲ್ಲಿ 43.78 ಲಕ್ಷ ಟನ್ಗಳಷ್ಟಿತ್ತು.
ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ 25.51 ಲಕ್ಷ ಟನ್ಗಳಿಂದ 51.55 ಲಕ್ಷ ಟನ್ಗಳಿಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಉತ್ಪಾದನೆಯು 21.90 ಲಕ್ಷ ಟನ್ಗಳಿಂದ 29.80 ಲಕ್ಷ ಟನ್ಗಳಿಗೆ ಏರಿಕೆಯಾಗಿದೆ.
ಮಾರುಕಟ್ಟೆಯ ವರದಿಯ ಪ್ರಕಾರ, 2020ರ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ 3 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗಿದೆ.
ಉತ್ಪಾದನೆ ವಿವರ
310 ಲಕ್ಷ ಟನ್
2020-21ನೇ ಮಾರುಕಟ್ಟೆ ವರ್ಷಕ್ಕೆ ಅಂದಾಜು
274 ಲಕ್ಷ ಟನ್
2019-20ನೇ ಮಾರುಕಟ್ಟೆ ವರ್ಷದಲ್ಲಿ ಆಗಿರುವ ಉತ್ಪಾದನೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.