ಮಂಗಳವಾರ, ಜನವರಿ 31, 2023
18 °C
ನಳಿನ್‌ ನೇಗಿ ಮಧ್ಯಂತರ ಸಿಇಒ ಆಗಿ ನೇಮಕ

ಭಾರತ್‌ಪೇ ಸಿಇಒ ಸುಹೈಲ್ ಸಮೀರ್‌ ರಾಜೀನಾಮೆ

‍ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣಕಾಸು ಯೂನಿಕಾರ್ನ್‌ ಸ್ಟಾರ್ಟ‍ಪ್ ‘ಭಾರತ್‌ಪೇ‘ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನದಿಂದ ಸುಹೈಲ್ ಸಮೀರ್ ಕೆಳಗಿಳಿದಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 7 ರಿಂದ ಅವರು ಕಾರ್ಯತಂತ್ರದ ಸಲಹೆಗಾರ (strategic advisor) ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ. 

ಸದ್ಯ ಸಿಎಫ್‌ಒ ಆಗಿರುವ ನಳಿನ್‌ ನೇಗಿ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಕ ಮಾಡಲಾಗಿದೆ. 

‘ಭಾರತದಲ್ಲಿ ಫಿನ್‌ಟೆಕ್ ಮಾರುಕಟ್ಟೆಯಲ್ಲಿ ಭಾರತ್‌ಪೇಯನ್ನು ನಾಯಕತ್ವದ ಸ್ಥಾನಕ್ಕೆ ತರಲು ಶ್ರಮಿಸಿದ ಹಾಗೂ ಈ ಸಮಯದಲ್ಲಿ ವಿವಿಧ ಸವಾಲುಗಳನ್ನು ಎದುರಿಸಲು ನಮಗೆ ಸಹಾಯ ಮಾಡುವಲ್ಲಿ ಸುಹೈಲ್ ಅವರು ನೀಡಿದ ಮಹತ್ತರ ಕೊಡುಗೆಗಾಗಿ ನಾವು ಮಂಡಳಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ‘ ಎಂದು ಭಾರತ್‌ಪೇ ಬೋರ್ಡ್‌ನ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು