ಭಾನುವಾರ, ನವೆಂಬರ್ 27, 2022
26 °C

‘ಭಾರತದ ಪವನ ಮಾನವ’ ಖ್ಯಾತಿಯ, ಸುಜ್ಲಾನ್ ಎನರ್ಜಿ ಸಂಸ್ಥಾಪಕ ತುಳಸಿ ತಂತಿ ಇನ್ನಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸುಜ್ಲಾನ್ ಎನರ್ಜಿ ಕಂಪನಿಯ ಸಂಸ್ಥಾಪಕ ತುಳಸಿ ತಂತಿ (64) ಅವರು ಹೃದಯ ಸ್ತಂಭನದಿಂದಾಗಿ ಶನಿವಾರ ಸಂಜೆ ಮೃತಪಟ್ಟರು ಎಂದು ಕಂಪನಿ ತಿಳಿಸಿದೆ. ತಂತಿ ಅವರು ‘ಭಾರತದ ಪವನ ಮಾನವ’ ಎಂದೇ ಖ್ಯಾತರಾಗಿದ್ದರು.

ಪವನ ವಿದ್ಯುತ್ ಉತ್ಪಾದನಾ ಉದ್ಯಮ ಕ್ಷೇತ್ರದಲ್ಲಿ ಅವರು ಮುಂಚೂಣಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ನವೀಕರಿಸಬಹುದಾದ ಇಂಧನ ವಲಯಗಳಲ್ಲಿನ ವಹಿವಾಟಿನಲ್ಲಿ ಇರುವ ಅವಕಾಶಗಳನ್ನು ಅವರು 1995ರಲ್ಲಿಯೇ ಕಂಡುಕೊಂಡಿದ್ದರು.

ತಂತಿ ಅವರ ನಾಯಕತ್ವದಲ್ಲಿ ಸುಜ್ಲಾನ್ ಎನರ್ಜಿ ಕಂಪನಿಯು ದೇಶದ ಅತಿದೊಡ್ಡ ಪವನ ವಿದ್ಯುತ್ ಉತ್ಪಾದನಾ ಕಂಪನಿಯಾಗಿ ಬೆಳೆಯಿತು. ಕಂಪನಿಯು ದೇಶದ ಪವನ ವಿದ್ಯುತ್ ಉತ್ಪಾದನಾ ಮಾರುಕಟ್ಟೆಯಲ್ಲಿ ಶೇಕಡ 33ರಷ್ಟು ಪಾಲು ಹೊಂದಿದೆ, 17 ದೇಶಗಳಲ್ಲಿ ವಹಿವಾಟು ಹೊಂದಿದೆ. ತಂತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು