ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಗ್ಗಿಯಿಂದ ಇ–ಬೈಕ್‌ ಬಳಕೆ

Last Updated 5 ಆಗಸ್ಟ್ 2021, 17:31 IST
ಅಕ್ಷರ ಗಾತ್ರ

ಬೆಂಗಳೂರು: ಹೋಟೆಲ್‌ ಹಾಗೂ ರೆಸ್ಟಾರೆಂಟ್‌ಗಳಿಂದ ಗ್ರಾಹಕರ ಮನೆಗಳಿಗೆ ಆಹಾರ ತಲುಪಿಸಲು ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಲು ಸ್ವಿಗ್ಗಿ ಕಂಪನಿ ಮತ್ತು ಹೀರೊ ಲೆಕ್ಟ್ರೊ ಕಾರ್ಗೊ (ಎಚ್‍ಎಲ್‍ಸಿ) ಒಪ್ಪಂದ ಮಾಡಿಕೊಂಡಿವೆ.

ಇದರ ಅನ್ವಯ ‘ಸ್ವಿಗ್ಗಿ’ ಕಂಪನಿಯು ಆಹಾರವನ್ನು ಮನೆ ಬಾಗಿಲಿಗೆ ತಲುಪಿಸಲು ಎಚ್‍ಎಲ್‍ಸಿ ತಯಾರಿಸುವ ವಿನ್ (ಡಬ್ಲ್ಯುಐಎನ್‍ಎನ್) ಇ–ಬೈಕ್‍ ಬಳಸಲಿದೆ.

ಸ್ವಿಗ್ಗಿ ಕಂಪನಿಯ ವಾಣಿಜ್ಯ ವಹಿವಾಟುಗಳ ಹಿರಿಯ ಉಪಾಧ್ಯಕ್ಷ ಶಿವಚರಣ್ ಪುಲುಗುರ್ತ, ‘ನಮ್ಮ ಗ್ರಾಹಕರಿಗೆ ಪರಿಸರಸ್ನೇಹಿ ಮತ್ತು ಸುಸ್ಥಿರ ಮಾದರಿಯನ್ನು ಅನುಸರಿಸಿ ಆಹಾರ ತಲುಪಿಸಲಿದ್ದೇವೆ. 2025ರ ಮಾರ್ಚ್ ವೇಳೆಗೆ ಪ್ರತಿದಿನ ಆಹಾರ ಪೂರೈಸುವಾಗ ಎಂಟು ಲಕ್ಷ ಕಿ.ಮೀ.ನಷ್ಟು ದೂರವನ್ನು ವಿದ್ಯುತ್ ಚಾಲಿತ ವಾಹನಗಳ ಮೂಲಕವೇ ಕ್ರಮಿಸುವ ಗುರಿಯನ್ನು ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.

ಸ್ವಿಗ್ಗಿ ಪ್ರಾಯೋಗಿಕವಾಗಿ ಹೈದರಾಬಾದ್‍ನಲ್ಲಿ ವಿನ್ ಇ–ಬೈಕ್‍ ಬಳಸಲು ಆರಂಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT