ಎಚ್ಎಸ್‍ಬಿಸಿ ಭಾರತೀಯ ಖಾತೆದಾರರ ಮಾಹಿತಿ ಹಸ್ತಾಂತರಕ್ಕೆ ಸ್ವಿಟ್ಜರ್ಲೆಂಡ್ ಸಿದ್ದತೆ

7

ಎಚ್ಎಸ್‍ಬಿಸಿ ಭಾರತೀಯ ಖಾತೆದಾರರ ಮಾಹಿತಿ ಹಸ್ತಾಂತರಕ್ಕೆ ಸ್ವಿಟ್ಜರ್ಲೆಂಡ್ ಸಿದ್ದತೆ

Published:
Updated:

ನವದೆಹಲಿ: ಎಚ್‍ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಭಾರತೀಯರ ಮಾಹಿತಿಗಳನ್ನು ಹಸ್ತಾಂತರಿಸಲು ಸ್ವಿಟ್ಜರ್ಲೆಂಡ್ ಸಿದ್ಧತೆ ನಡೆಸಿದೆ. ಇಲ್ಲಿ ಖಾತೆ ಹೊಂದಿರುವವರ ಜತೆ ಸ್ವಿಟ್ಜರ್ಲೆಂಡ್ ತೆರಿಗೆ ಪ್ರಾಧಿಕಾರ (ಎಫ್‌ಟಿಎ) ಸಂವಹನ ನಡೆಸಿದ್ದು, ಈ ಬಗ್ಗೆ ಲಿಖಿತ ಒಪ್ಪಿಗೆ ಮತ್ತು ಸ್ವಿಸ್ ವಿಳಾಸ ನೀಡಬೇಕೆಂದು ಕೋರಿದೆ.

2011ರಲ್ಲಿ ಫ್ರೆಂಚ್ ಅಧಿಕಾರಿಗಳು ಎಚ್‍ಎಸ್‍ಬಿಸಿ ಖಾಸಗಿ ಬ್ಯಾಂಕ್ (ಸ್ವೀಸ್)ನಲ್ಲಿ ಖಾತೆ ಹೊಂದಿರುವ 628 ಭಾರತೀಯರ ಪಟ್ಟಿಯನ್ನು ಭಾರತಕ್ಕೆ ನೀಡಿದ್ದರು. 2015ರಲ್ಲಿ ಸ್ವಿಸ್ ಲೀಕ್  -ದಿ ಇಂಡಿಯನ್ ಎಕ್ಸ್‌ಪ್ರೆಸ್‌,  ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (ಐಸಿಐಜೆ) ಮತ್ತು  ಫ್ರೆಂಚ್ ಸುದ್ದಿ ಪತ್ರಿಕೆ ಲೆ ಮೋಂಡೆ ನಡೆಸಿದ ತನಿಖೆಯಲ್ಲಿ 2006-07ರ ಅವಧಿಯಲ್ಲಿ 1195 ಮಂದಿ ಸ್ವಿಸ್ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದಾರೆ ಎಂದು ಹೇಳಿತ್ತು. ಇಲ್ಲಿರುವ ಖಾತೆಗಳಲ್ಲಿನ ಒಟ್ಟು ಮೊತ್ತ ₹25, 420 ಕೋಟಿ ಆಗಿದೆ. 

ಇದರ ಪೈಕಿ  276 ಭಾರತೀಯ ಖಾತೆದಾರರು  ಕನಿಷ್ಠ  ₹1 ದಶಲಕ್ಷ ಡಾಲರ್ ಹಣ ಇರಿಸಿದ್ದು, ಬಾಕಿ ಉಳಿದ  85 ಮಂದಿ ದೇಶದಲ್ಲಿ ವಾಸವಾಗಿರುವವರಾಗಿದ್ದಾರೆ.

2018 ಆಗಸ್ಟ್ ನಲ್ಲಿ ಲೋಜಾನ್‍ನಲ್ಲಿರುವ ಫೆಡರಲ್ ಕೋರ್ಟ್ ಆಫ್ ಸ್ವಿಟ್ಜರ್ಲೆಂಡ್  ಆದೇಶದಂತೆ ಈ ಖಾತೆಗಳ ಮಾಹಿತಿ ಹಸ್ತಾಂತರ ಕಾರ್ಯ ಪ್ರವೃತ್ತವಾಗಿದೆ. ಎಚ್‍ಎಸ್‍ಬಿಸಿಯಲ್ಲಿ ಖಾತೆ ಹೊಂದಿರುವ ಇಬ್ಬರು ಭಾರತೀಯರು, ಭಾರತಕ್ಕೆ ಯಾವುದೇ ಖಾತೆಯ ಮಾಹಿತಿ ಹಸ್ತಾಂತರಿಸುವುದು ಮಾಹಿತಿ ಸೋರಿಕೆಯಾಗಿರುತ್ತದೆ ಎಂದು ಹೇಳಿದ ಬೆನ್ನಲ್ಲೇ ಕೋರ್ಟ್ ಈ ಆದೇಶ ನೀಡಿತ್ತು.

ಆರು ವಾರಗಳ ಹಿಂದೆ  ಭಾರತೀಯ ಖಾತೆದಾರರಿಗೆ ಎಫ್‍ಟಿಎಯಿಂದ ಸಂದೇಶ ಲಭಿಸಿದ್ದು, ಡಿಟಿಎ (double taxation agreement)ಯಲ್ಲಿ ಉಲ್ಲೇಖಿಸಿದಂತೆ ಎಲ್ಲ ಅಗತ್ಯಗಳನ್ನು ಪೂರೈಸುವಂತಿರಬೇಕು. ಈ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.

ಬ್ಯಾಂಕ್ ಕಳಿಸಿದ ಸಂದೇಶ ಈ ರೀತಿ ಇದೆ
31 ಅಕ್ಟೋಬರ್ 2018 ದಿನಾಂಕದಲ್ಲಿ ಕಳುಹಿಸಿರುವ ಮನವಿಯಲ್ಲಿ ನಿಮ್ಮ ಮಾಹಿತಿಯನ್ನು ನೀಡುವಂತೆ ಭಾರತದ ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ನಾವು ಎಚ್‍ಎಸ್‍ಬಿಸಿ ಖಾಸಗಿ ಬ್ಯಾಂಕ್ (ಸ್ವೀಸ್) ಆ ಮಾಹಿತಿಯನ್ನು ನೀಡುವುದಕ್ಕಾಗಿ ನಿಮ್ಮ  ಸಹಕಾರ ಬಯಸಿದ್ದೇವೆ.  ಏಪ್ರಿಲ್ 1, 2011ರಿಂದ ಆ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು  ಸ್ವಿಟ್ಜರ್ಲೆಂಡ್ ಪ್ರಸ್ತುತ ಇರುವ ಜಾಗದ ವಿಳಾಸವನ್ನು ನೀಡಿ ಸಹಕರಿಸಬೇಕು.

ಸ್ವಿಸ್ ಪ್ರತಿನಿಧಿಯ ಹೆಸರು ಅಥವಾ ವಿಳಾಸವನ್ನು ನೀಡುವುದು ಬೇಡ ಎಂದು ಎಚ್ಎಸ್‍ಬಿಸಿ ಭಾರತೀಯ ಖಾತೆದಾರರಿಗೆ ಹೇಳಿದೆ, ಅಂತಿಮ ಪಟ್ಟಿ ಸ್ವಿಸ್ ಫೆಡರಲ್ ಗಜೆಟ್‍ನಲ್ಲಿ ಪ್ರಕಟಿಸಲಾಗುವುದು. ಗಜೆಟ್‍ನಲ್ಲಿ ಇನಿಶಿಯಲ್ಸ್, ಜನ್ಮ ದಿನಾಂಕ ಮತ್ತು ರಾಷ್ಟ್ರೀಯತೆಯನ್ನು ಮಾತ್ರ ಪ್ರಕಟಿಸಲಾಗುವುದು.
ಭಾರತೀಯ ಖಾತೆದಾರರು ತಮ್ಮ ಮಾಹಿತಿಯನ್ನು ನೀಡಲು ಸಮ್ಮತಿ ಪತ್ರವನ್ನು ಭರ್ತಿಗೊಳಿಸಬೇಕು. 

ಇಂಟರ್‌ನ್ಯಾಷನಲ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆನ್ಸ್  ಇನ್ ಟ್ಯಾಕ್ಸ್ ಮ್ಯಾಟರ್ಸ್ (TAAA)ನಲ್ಲಿರುವ  ಫೆಡರಲ್ ಕಾಯ್ದೆ 28 ಸೆಪ್ಟೆಂಬರ್  2012ರ ಆರ್ಟಿಕಲ್ 16ರ ಪ್ರಕಾರ ಸಮ್ಮತಿ ಪತ್ರದಲ್ಲಿನ ಕಾರ್ಯ ವಿಧಾನಗಳಿರುತ್ತವೆ.

ಫ್ರೆಂಚ್ಅಧಿಕಾರಿಗಳು  ಸುಮಾರು 700 ಎಚ್‍ಎಸ್‍ಬಿಸಿ  ಖಾತೆದಾರರ ಪಟ್ಟಿ ನೀಡಿದ್ದು ಇವರ ಮೇಲೆ ತೆರಿಗೆ ಹೇರುವ ಕಾರ್ಯ ಶುರುವಾಗಿದೆ ಎಂದು  2011 ಆಗಸ್ಟ್7ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು. ಲೋಜಾನ್‍ನ ಫೆಡರಲ್ ಕೋರ್ಟ್ ಆದೇಶದ ಬೆನ್ನಲ್ಲೇ  2018 ಆಗಸ್ಟ್ 7ರಂದು ವಿತ್ತ ಸಚಿವ ಪೀಯೂಷ್ ಗೋಯಲ್ ಅವರು 10 ದಿನಗಳೊಳಗೆ ಎಚ್‍ಎಸ್‍ಬಿಸಿ ಖಾತೆ ಮಾಹಿತಿ ಕೈಸೇರುವ ನಿರೀಕ್ಷೆ ಇದೆ ಎಂದಿದ್ದರು. ಎಚ್‍ಎಸ್‍ಬಿಸಿಯಲ್ಲಿ ಖಾತೆ ಹೊಂದಿರುವವರು ಬಹಿರಂಗ ಪಡಿಸದ ಆದಾಯ ರ್‌8,448 ಕೋಟಿ ಇದೆ ಎಂದಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !