ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಡಿಕೇಟ್‌ ಐಎಫ್‌ಎಸ್‌ಸಿ ಕೋಡ್‌ ಬದಲು

Last Updated 11 ಜೂನ್ 2021, 11:20 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಗಳ ಐಎಫ್‌ಎಸ್‌ಸಿ ಕೋಡ್‌ ಜುಲೈ 1ರಿಂದ ಬದಲಾಗಲಿದೆ. ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಜೊತೆ ಈಗಾಗಲೇ ವಿಲೀನ ಆಗಿದ್ದು, ಎನ್‌ಇಎಫ್‌ಟಿ, ಆರ್‌ಟಿಜಿಎಸ್‌, ಐಎಂಪಿಎಸ್ ವ್ಯವಸ್ಥೆಗಳ ಮೂಲಕ ಹಣ ವರ್ಗಾವಣೆ ಮಾಡುವವರು ಕೆನರಾ ಬ್ಯಾಂಕ್‌ ನೀಡುವ ಹೊಸ ಐಎಫ್‌ಎಸ್‌ಸಿ ಕೋಡ್ ಬಳಕೆ ಮಾಡಬೇಕಿದೆ.

ಹಿಂದೆ ಸಿಂಡಿಕೇಟ್ ಬ್ಯಾಂಕ್‌ ಶಾಖೆಗಳಾಗಿದ್ದ, ಈಗ ಕೆನರಾ ಬ್ಯಾಂಕ್‌ನ ಶಾಖೆಗಳಾಗಿ ಪರಿವರ್ತನೆ ಕಂಡಿರುವ ಶಾಖೆಗಳ ಐಎಫ್‌ಎಸ್‌ಸಿ ಕೋಡ್ ಯಾವುದು ಎಂಬುದನ್ನು canarabank.com/IFSC.html ವಿಳಾಸಕ್ಕೆ ಭೇಟಿ ನೀಡಿ ಕಂಡುಕೊಳ್ಳಬಹುದು ಎಂದು ಕೆನರಾ ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಅಲ್ಲದೆ, ಕೆನರಾ ಬ್ಯಾಂಕ್‌ನ ಯಾವುದೇ ಶಾಖೆಗೆ ಭೇಟಿ ನೀಡಿ ಹೊಸ ಐಎಫ್‌ಎಸ್‌ಸಿ ಕೋಡ್‌ ತಿಳಿದುಕೊಳ್ಳಬಹುದು.

ಸಿಂಡಿಕೇಟ್ ಬ್ಯಾಂಕ್‌ನ ಗ್ರಾಹಕರಾಗಿದ್ದವರು ಬದಲಾಗಿರುವ ಐಎಫ್‌ಎಸ್‌ಸಿ ಹಾಗೂ ಎಂಐಸಿಆರ್‌ ಕೋಡ್ ಇರುವ ಹೊಸ ಚೆಕ್ ಪುಸ್ತಕವನ್ನು ಪಡೆದುಕೊಳ್ಳಬೇಕು.

ವಿದೇಶಿ ವಿನಿಮಯ ವಹಿವಾಟುಗಳಲ್ಲಿ ಬಳಕೆ ಮಾಡುವ ಸ್ವಿಫ್ಟ್‌ ಕೋಡ್‌ ಸಹ ಜುಲೈ 1ರಿಂದ ಬದಲಾಗಲಿದೆ. ವಿದೇಶಿ ವಿನಿಮಯ ವಹಿವಾಟುಗಳಲ್ಲಿ ಗ್ರಾಹಕರು CNRBINBBFD ಕೋಡ್‌ಅನ್ನು ಬಳಕೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸಿಂಡಿಕೇಟ್ ಬ್ಯಾಂಕ್‌, ಕೆನರಾ ಬ್ಯಾಂಕ್ ಜೊತೆ 2020ರ ಏಪ್ರಿಲ್‌ನಲ್ಲಿ ವಿಲೀನಗೊಂಡಿದೆ. ವಿಲೀನದ ನಂತರ ಕೆನರಾ ಬ್ಯಾಂಕ್ ದೇಶದಲ್ಲಿ, ಸರ್ಕಾರಿ ಸ್ವಾಮ್ಯದ ನಾಲ್ಕನೆಯ ಅತಿದೊಡ್ಡ ಬ್ಯಾಂಕ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT