ಬುಧವಾರ, ನವೆಂಬರ್ 13, 2019
18 °C

ಸಿಂಡಿಕೇಟ್ ಬ್ಯಾಂಕ್‌ ಸೇವೆ ವ್ಯತ್ಯಯ

Published:
Updated:

ಮಂಗಳೂರು: ಸಿಂಡಿಕೇಟ್ ಬ್ಯಾಂಕ್‌ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ 13ರ ರಾತ್ರಿ 10 ಗಂಟೆಯಿಂದ 15ರ ರಾತ್ರಿ 10 ಗಂಟೆಯವರೆಗೆ ಬ್ಯಾಂಕ್‌ನ ಎಟಿಎಂ, ಪಿಒಎಸ್, ಇಂಟರ್‌ನೆಟ್, ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್ ಮತ್ತು ಯುಪಿಐ ಸೇವೆಗಳು ವ್ಯತ್ಯಯವಾಗಲಿವೆ.

ಇದು ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ. ಗ್ರಾಹಕರು ಸಹಕರಿಸಬೇಕು ಎಂದು ಸಿಂಡಿಕೇಟ್‌ ಬ್ಯಾಂಕ್ ಮಣಿಪಾಲ ವಲಯ ಕಚೇರಿಯ ಮ್ಯಾನೇಜರ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)