ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಟಿಗಾರ್‌ ಇವಿ ಬೆಲೆ ಇಳಿಕೆ

Last Updated 1 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ತನ್ನ ವಿದ್ಯುತ್‌ ಚಾಲಿತ ವಾಹನ ಟಿಗಾರ್‌ ಇವಿ ಬೆಲೆಯನ್ನು ₹ 80 ಸಾವಿರದವರೆಗೂ ಕಡಿತ ಮಾಡಿದೆ.

‘ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ಜಿಎಸ್‌ಟಿ ದರ ಶೇ 12 ರಿಂದ 5ಕ್ಕೆ ತಗ್ಗಿಸಲಾಗಿದೆ. ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಕಂಪನಿ ಅಧ್ಯಕ್ಷ ಶೈಲೇಶ್‌ ಚಂದ್ರ ತಿಳಿಸಿದ್ದಾರೆ.

ಟಿಗಾರ್‌ ಇವಿಯ ಎಲ್ಲಾ ಆವೃತ್ತಿಗಳ ಬೆಲೆಯಲ್ಲಿಯೂ ಇಳಿಕೆ ಆಗಲಿದೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಎಕ್ಸ್‌ ಷೋರೂಂ ಬೆಲೆ ₹ 12.35 ಲಕ್ಷದಿಂದ ₹ 12.71 ಲಕ್ಷ ಇತ್ತು. ಅದು ₹ 11.58 ಲಕ್ಷದಿಂದ ₹ 11.92 ಲಕ್ಷಕ್ಕೆ ಇಳಿಕೆಯಾಗಿದೆ.ಆದರೆ ಈ ಬೆಲೆಗಳು ಫೇಮ್‌ ಸಬ್ಸಿಡಿ ಮತ್ತು ಮೂಲದಲ್ಲಿ ತೆರಿಗೆ ಸಂಗ್ರಹವನ್ನು (ಟಿಸಿಎಸ್‌) ಒಳಗೊಂಡಿಲ್ಲ ಎಂದಿದ್ದಾರೆ.

ಏಥರ್‌ ಸ್ಕೂಟರ್‌ ಬೆಲೆಯೂ ಇಳಿಕೆ: ವಿದ್ಯುತ್‌ ಚಾಲಿತ ಸ್ಕೂಟರ್‌ಗಳನ್ನು ತಯಾರಿಸುವ ಏಥರ್‌ ಎನರ್ಜಿ ಕಂಪನಿಯು ಸಹ ₹ 9 ಸಾವಿರದವರೆಗೆ ಬೆಲೆಯಲ್ಲಿ ಇಳಿಕೆ ಮಾಡಿದೆ.

ಬೆಂಗಳೂರಿನಲ್ಲಿ ಆನ್‌ರೋಡ್‌ ಬೆಲೆ ಏಥರ್‌ 450ಗೆ ₹ 1,13,715 ಮತ್ತು ಏಥರ್‌ 340ಗೆ ₹ 1,22,224 ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT