ಬುಧವಾರ, ಡಿಸೆಂಬರ್ 1, 2021
20 °C

ಪುಣೆ ಘಟಕದಲ್ಲಿ 1 ಲಕ್ಷ ಆಲ್ಟ್ರೋಜ್‌ ತಯಾರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಟಾಟಾ ಮೋಟರ್ಸ್‌ ಕಂಪನಿಯು ತನ್ನ ಪುಣೆ ಘಟಕದಲ್ಲಿ ಒಟ್ಟಾರೆ 1 ಲಕ್ಷ ಆಲ್ಟ್ರೋಜ್‌ ಕಾರು ತಯಾರಿಕೆ ಮಾಡಿದೆ.

ಕಂಪನಿಯು 2019ರ ನವೆಂಬರ್‌ ಅಂತ್ಯದಲ್ಲಿ ಆಲ್ಟ್ರೋಜ್‌ ತಯಾರಿಕೆ ಆರಂಭಿಸಿತು. 2020ರ ಜನವರಿಯಲ್ಲಿ ಬಿಡುಗಡೆ ಮಾಡಿತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಆಲ್ಟ್ರೋಜ್‌ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಸವಾಲಿನ ಈ ಸಂದರ್ಭದಲ್ಲಿ ಈ ಮೈಲುಗಲ್ಲು ಸಾಧಿಸಿದ್ದು, ನಮ್ಮ ಗ್ರಾಹಕರು ಮತ್ತು ಪಾಲುದಾರರ ನಿರಂತರ ಬೆಂಬಲ ಮತ್ತು ನಿಷ್ಠೆಗೆ ಕೃತಜ್ಞರಾಗಿರುತ್ತೇವೆ’ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಉಪಾಧ್ಯಕ್ಷ ರಾಜನ್‌ ಅಂಬಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು